ಚಾಮರಾಜನಗರ, ಮಾ.13-ಗೂಡ್ಸ್ ಆಟೋವನ್ನು ಓವರ್ಟೇಕ್ ಮಾಡಲು ಹೋದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಓರ್ವ ಮೃತಪಟ್ಟು ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟಿ.ಮರಳ್ಳಿ ಗ್ರಾಮದ ಮಲ್ಲಣ್ಣ ಎಂಬುವವರ ಪುತ್ರ ನಟೇಶ್ಮೂರ್ತಿ (28) ಮೃತ ದುರ್ದೈವಿ. ನಾಗರಾಜ್ ಗಾಯಗೊಂಡಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಉಡಿಗಾಲ ಗ್ರಾಮದ ಬಳಿ ಇಂದು ಬೆಳಗ್ಗೆ 8.40ರ ಸಮಯದಲ್ಲಿ ಗೂಡ್ಸ್ ಆಟೋದಲ್ಲಿ ಸೌತೆಕಾಯಿ ತುಂಬಿಕೊಂಡು ನಟೇಶ್ಮೂರ್ತಿ ಮತ್ತು ನಾಗರಾಜ್ ತೆರಳುತ್ತಿದ್ದಾಗ ಚಾಮರಾಜನಗರದಿಂದ ಗುಂಡ್ಲುಪೇಟೆಗೆ ಹೋಗುತ್ತಿದ್ದ ಬಸ್, ಆಟೋವನ್ನು ಓವರ್ಟೇಕ್ ಮಾಡಲು ಹೋಗಿ ಹಿಂದಿನಿಂದ ಡಿಕ್ಕಿ ಹೊಡೆದು
ಈ ಅಪಘಾತ ಸಂಭವಿಸಿದೆ. ಸಂಚಾರಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.