
ರಾಜ್ಯದಲ್ಲಿ ಸುಮಾರು 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಸೌಲಭ್ಯವನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದಾರೆ. ಅವರು, ಬಳ್ಳಾರಿಯಲ್ಲಿಂದು ನೂತನ ನಗರ ಸಾರಿಗೆ ಬಸ್ ನಿಲ್ದಾಣದ ಲೋಕಾರ್ಪಣೆ ಮತ್ತು ಕೇಂದ್ರೀಯ ಬಸ್ ನಿಲ್ದಾಣದ ಉನ್ನತೀಕರಣ ಕಾಮಗಾರಿ ಹಾಗೂ ನೂತನ ಬಸ್ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ರಾಜ್ಯ ಸಾರಿಗೆ ವ್ಯವಸ್ಥೆ ಇಡೀ ದೇಶದಲ್ಲಿಯೇ ಅತ್ಯುತ್ತಮವೆನಿಸಿದ್ದು, ಈ ವರೆಗೆ 210 ಪ್ರಶಸ್ತಿಗಳು ಬಂದಿವೆ ಎಂದು ಸಚಿವರು ತಿಳಿಸಿದರು. ಬಸ್‍ಗಳಲ್ಲಿ ಶೌಚಾಲಯ ಸೌಲಭ್ಯ ಒಳಗೊಂಡ ಫ್ಲೈ ಬಸ್‍ಗಳನ್ನು ಆರಂಭಿಸಲಾಗಿದೆ ಎಂದು ಎಚ್.ಎಂ ರೇವಣ್ಣ ತಿಳಿಸಿದರು.