ಸರ್ಕಾರಿ ನೌಕರರ ವಯಸ್ಸನ್ನು 60ರಿಂದ 62ಕ್ಕೆ ಏರಿಕೆಯ ಖಂಡನೆ

ಬೆಂಗಳೂರು,ಮಾ.13- ಸರ್ಕಾರಿ ನೌಕರರ ವಯಸ್ಸನ್ನು 60ರಿಂದ 62ಕ್ಕೆ ಏರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸುವುದಾಗಿ ಉದ್ಯೋಗಕ್ಕಾಗಿ ಯುವ ಜನ ವೇದಿಕೆ ಸಂಚಾಲಕ ಮುತ್ತುರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಏರಿಸಲು ತೆರೆಮರೆಯಲ್ಲಿ ಹುನ್ನಾರ ನಡೆಸಿದೆ. ಇದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಖಾಲಿ ಇರುವ ಮೂರು ಲಕ್ಷದಷ್ಟು ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಲಕ್ಷಾಂತರ ಯುವ ಜನರು ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ ನಿವೃತ್ತಿ ವಯಸ್ಸನ್ನು ಏರಿಸಲು ಹೊರಟಿದೆ. ಈ ಪ್ರಸ್ತಾಪವನ್ನು ಕೂಡಲೇ ಕೈ ಬಿಟ್ಟು , ಈ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದರು.
ನಿವೃತ್ತಿ ವಯಸ್ಸನ್ನು ದೇಶದ ಒಳಿತಿಗಾಗಿ 60ರಿಂದ 58ಕ್ಕೆ ಇಳಿಸಬೇಕು ಮತ್ತುಕೂಡಲೇ ಹೊಸ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ 2013ರ ಎನ್‍ಎಸ್‍ಡಿಪಿಯ ವರದಿ ಪ್ರಕಾರ 95ಲಕ್ಷ ನಿರುದ್ಯೋಗಿಗಳು ಇದ್ದಾರೆ. ಜೊತೆಗೆ ಪ್ರತಿ ವರ್ಷ 8 ಲಕ್ಷ ಯುವಜನರು ತಮ್ಮ ವಿದ್ಯಾಭ್ಯಾಸ ಮುಗಿಸಿ ಉದ್ಯೋಗದ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು , ಕರ್ನಾಟಕದಲ್ಲಿ ಒಂದು ಕೋಟಿಗೂ ಹೆಚ್ಚು ಯುವ ಜನರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ದೇಶದಲ್ಲಿ ನಿರುದ್ಯೋಗ ಇಂದು ನಂ.1 ಸಮಸ್ಯೆಯಾಗಿದೆ ಎಂದರು. ಸರ್ಕಾರಿ ನೌಕರರ ನಿವೃತ್ತಿ ವಯಸಿನ ಏರಿಕೆಯನ್ನು ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಗೆ ಕಡಿಮೆಗೊಳಿಸುವಂತೆ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ