ಬೆಂಗಳೂರು, ಮಾ.13- ಕೊಪ್ಪಳ ಎಸ್ಪಿ ವರ್ಗಾವಣೆಗೆ ಸಿಎಟಿ ತಡೆ ನೀಡಿದೆ. ಕೆಲವು ಐಪಿಎಸ್, ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿತ್ತು. ಕೊಪ್ಪಳ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅನೂಪ್ಶೆಟ್ಟಿ ಅವರು ಅವಧಿಗೂ ಮುನ್ನ ನಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂದು ಆಕ್ಷೇಪಿಸಿ ಸಿಎಟಿ ಮೊರೆ ಹೋಗಿದ್ದರು. ಇಂದು ಸಿಎಟಿ ಅವರ ವರ್ಗಾವಣೆಗೆ ತಡೆ ನೀಡಿದೆ. ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೂ ಕೂಡ ಸಿಎಟಿ ತಡೆ ನೀಡಿತ್ತು.