ಬೆಂಗಳೂರು,ಮಾ.13-ಆಯನ ಮಕ್ಕಳ ಅಕಾಡೆಮಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮಾ.14ರಂದು ಉದಯಭಾನು ಕಲಾಸಂಘದಲ್ಲಿ ಯುಗಾದಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 5.30ಕ್ಕೆ ಬಿಶ್ರೀನಿವಾರಾಜು ರಚನೆಯ, ಮಹೇಶ್ ಸಾಗರ್ ನಿರ್ದೇಶನದಲ್ಲಿ ಇದು ಕಾರಣ ನಾಟಕ ಹಾಗೂ ಸಂಜೆ 7 ಗಂಟೆಗೆ ವೀರೇಶ್ ಮುತ್ತಿನಮಠ ನಿರ್ದೇಶನದ ಪರಿಷ್ಕಾರ ನಾಟಕವನ್ನು ಏರ್ಪಡಿಸಲಾಗಿದೆ. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಹನುಮಕ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ರಂಗಭೂಮಿ ಕಲಾವಿದ ಆನಂದ್.ಡಿ ಕಳಸ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ರಂಗ ಕಲಾವಿದ ವೆಂಕಟರಮಣಯ್ಯ, ಬೆಂಗಳೂರು ರಂಗ ಕಲಾವಿದರ ವಿವಿದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಎಂ.ಗೋಪಾಲ ಆಗಮಿಸಲಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಅವಕಾಶವಿದೆ ಎಂದು ಟ್ರಸ್ಟ್ನ ಸಂಚಾಲಕ ಮಂಜುನಾಥ್ ದೊಡ್ಡಮನಿ ತಿಳಿಸಿದ್ದಾರೆ.