ಬೆಂಗಳೂರು,ಮಾ.12-ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಕಾಪೆರ್Çೀರೇಟರ್ ನೀತಿಗಳನ್ನು ಖಂಡಿಸಿ ಮಾ.15ರಂದು ದೇಶವ್ಯಾಪಿ ಧರಣಿ ಸತ್ಯಾಗ್ರಹ, ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಮುಖಂಡರಾದ ಅನಂತ ಸುಬ್ಬರಾವ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಧರಣಿ ಹಮ್ಮಿಕೊಂಡಿದ್ದು , ಕೇಂದ್ರ ಸರ್ಕಾರವು ಕಾರ್ಮಿಕ ವಿರೋಧಿ ನೀತಿ, ರೈತ-ಜನ ವಿರೋಧಿ ನೀತಿಗಳಮೂಲಕ ಜನರ ಬದುಕನ್ನು ಹೈರಾಣಾಗಿಸುತ್ತಿದೆ. ಕೇಂದ್ರ ಸರ್ಕಾರದ ನೋಟು ರದ್ಧತಿ, ಸರಕು ಸೇವಾ ತೆರಿಗೆಯಂತಹ ಆರ್ಥಿಕ ಭಯೋತ್ಪಾದನಾ ಕ್ರಮಗಳು, ಸಾವಿರಾರು ಸಣ್ಣ ಮತ್ತು ಮಧ್ಯ ಪ್ರಮಾಣದ ಉದ್ದಿಮೆಗಳನ್ನು ಮುಚ್ಚಿ ನಿರುದ್ಯೋಗಕ್ಕೆ ಕಾರಣವಾಗಿದೆ.
ಈ ಎಲ್ಲ ಕ್ರಮಗಳನ್ನು ವಿರೋಧಿಸಿ 2017 ಜುಲೈ 1ರಿಂದ 2 ಆಗಸ್ಟ್ 8ರವರೆಗೆ ಸುದೀರ್ಘವಾಗಿ 36 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಪ್ರತಿಭಟಿಸಿದ್ದೇವು.
ಉಪವಾಸ ಸತ್ಯಾಗ್ರಹ ನಡೆಸಿದರು. ನಮ್ಮ ಪ್ರತಿಭಟನೆ ವಿಫಲವಾದ ಕಾರಣ ಇದರ ಮುಂದುವರೆದ ಭಾಗವಾಗಿ ರಕ್ಷಣಾ ಉತ್ಪಾದನಾ ವಲಯದ ಕಾರ್ಖಾನೆಯ
ಕಾರ್ಮಿಕರು, ಇದೇ 15ರಂದು ಒಂದು ದಿನದ ಪ್ರತಿಭಟನೆಯನ್ನು ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರ ಸಂಘಟನೆಗಳ ಜಂಟಿ ಸಭೆಯನ್ನು ದೆಹಲಿಯಲ್ಲಿ ನಡೆಸಲಾಗಿದ್ದು , ಈ ಕಾರ್ಮಿಕರ ಹೋರಾಟವನ್ನು ಬೆಂಬಲಿಸುವುದಾಗಿ ಕರೆ ನೀಡಿದೆ. ಕಾರ್ಮಿಕ ವರ್ಗ ದಶಕಗಳ ಹೋರಾಟ ತ್ಯಾಗ-ಬಲಿದಾನದ ಫಲವಾಗಿ ಪಡೆದ ಸಾಂವಿಧಾನಿಕ ಹಾಗೂ ಕಾನೂನಾತ್ಮಕ ಹಕ್ಕುಗಳನ್ನು ಕೇಂದ್ರ ಸರ್ಕಾರ ನಾಶಪಡಿಸಲು ಸಂಚು ಮಾಡುತ್ತಿದೆ ಎಂದು ಆರೋಪಿಸಿದರು.
ಸಾರ್ವಜನಿಕರ ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಬೇಕು. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ ಹೊಸ ಉದ್ಯೋಗ ಸೃಷ್ಟಿ ಮಾಡಬೇಕು. ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ದೇಶದ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. 18 ಸಾವಿರ ರೂ. ವೇತನ ನಿಗದಿ ಮಾಡಬೇಕು, ಗುತ್ತಿಗೆ ಕಾರ್ಮಿಕರಿಗೆ ಖಾಯಂ ನೌಕರರಂತೆ ಸಮಾನವೇತನ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.