ಬೆಂಗಳೂರು,ಮಾ.12-ಕರ್ನಾಟಕ ಜಾತ್ಯಾತೀತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಇದೇ 14ರಂದು ಫ್ರೀಡಂಪಾರ್ಕ್‍ನಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಆರ್.ಮೋಹನ್‍ರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು, ಪ್ರತಿ ಚುನಾವಣೆಗಳಿಗೆ ಬಲಾಢ್ಯ ಪಕ್ಷಗಳು, ತಮ್ಮದೇ ಕ್ರಮ ಅನುಸರಿಸುವ ಮೂಲಕ ಅಧಿಕಾರವನ್ನು ಹಿಡಿಯುತ್ತವೆ. ವಿಶೇಷವಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಕ್ಕೆ ಆಪತ್ತು ತರಬೇಕಾದ ಕ್ರಮಗಳನ್ನು ಅನುಸರಿಸುತ್ತಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಅವಶ್ಯಕವಾಗಿದೆ ಎಂದರು. ಸಂವಿಧಾನವನ್ನು ಕೋಮುವಾದಿ ಜಾತ್ಯತೀತ ವಾದಿಗಳಿಂದ ರಕ್ಷಿಸಬೇಕಾಗಿದೆ. ಪ್ರಸ್ತುತ ಸಂವಿಧಾನಮತ್ತು ಪ್ರಜಾಪ್ರಭುತ್ವಕ್ಕೆ ಗಂಡಾಂತರ ತರಲಾಗುತ್ತಿದೆ. ಜಾತ್ಯತೀತೆಯನ್ನು ಹಾಳು ಮಾಡಲು ಹಣವಿಸುತ್ತಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ನಿವಾರಿಸಬೇಕೆಂದರು.
ಈ ಸಮಾವೇಶವನ್ನು ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಐ(ಎಂ) ಸೀತಾರಾಮ್ , ತಮಿಳುನಾಡಿನ ಡಿಪಿಐ ಅಧ್ಯಕ್ಷ ತಿರುಮಾವಳ್‍ಕಾರ್, ಆಂಧ್ರಪ್ರದೇಶದ, ಮಂದಕೃಷ್ಣ ಮಾದಿಗ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.