ಪಾಕ್ ವೈದ್ಯರಿಗೆ ಭಾರತೀಯ ವೈದ್ಯರಿಂದ ಯಕೃತ್ತ ಕಸಿ ಶಸ್ತ್ರ ಚಿಕಿತ್ಸೆ ತರಬೇತಿ!

ನವದೆಹಲಿಖ್ಯಾತ ಭಾರತೀಯ ಶಸ್ತ್ರಚಿಕಿತ್ಸಕ ಡಾ. ಸುಭಾಷ್ ಗುಪ್ತಾ ಅವರು, ಕರಾಚಿಯಲ್ಲಿ ಮೂರು ರಿಂದ ನಾಲ್ಕು ಯಕೃತ್ತು ಕಸಿ(liver transplant) ಶಸ್ತ್ರಚಿಕಿತ್ಸೆಯನ್ನು ನಡೆಸಲಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ.

ಈ ತಿಂಗಳು ಕರಾಚಿಯಲ್ಲಿರುವ ಡೌ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (ಡಿಯುಹೆಚ್ಎಸ್) ನ ಓಜಾ ಕ್ಯಾಂಪಸ್’ಗೆ ಡಾ.ಗುಪ್ತಾ ಅವರ ತಂಡ ಭೇಟಿ ನೀಡಲಿದೆ ಎಂದು ವರದಿ ಹೇಳಿದೆ.

ಕರಾಚಿಯ ಡಿಯುಹೆಚ್ಎಸ್ ನ ಓಝಾ ಕ್ಯಾಂಪಸ್ನಲ್ಲಿ ಮೂರು ರಿಂದ ನಾಲ್ಕು ಲಿವರ್ ಟ್ರಾನ್ಸ್’ಪ್ಲಾಂಟೇಶನ್ ಶಸ್ತ್ರಚಿಕಿತ್ಸೆ ನಡೆಸಲು ಡಾ. ಗುಪ್ತಾ ಆಗಮಿಸುತ್ತಿದ್ದಾರೆ ಎಂದು ಗ್ಯಾಸ್ಟ್ರೋಎನ್ಟೆರಾಲಜಿ ಮತ್ತು ಯಕೃತ್ತಿನ ರೋಗಗಳ ಬಗ್ಗೆ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ  ಡಿಯುಎಚ್ಎಸ್ ಉಪ ಕುಲಪತಿ ಪ್ರೊಫೆಸರ್ ಸಯೀದ್ ಖುರೇಷಿ ಹೇಳಿದ್ದಾರೆ.

ಅಲ್ಲದೆ, ಡಾ.ಗುಪ್ತಾ ಅವರು ಸಂಕೀರ್ಣ ಮತ್ತು ಕಠಿಣ ಶಸ್ತ್ರಚಿಕಿತ್ಸೆಗಳನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಅಲ್ಲಿನ ವೈದ್ಯರ ತಂಡಕ್ಕೆ ತರಬೇತಿ ನೀಡಲಿದ್ದಾರೆ ಎನ್ನಲಾಗಿದೆ. ದೆಹಲಿ ನಿವಾಸಿಯಾಗಿರುವ 56 ವರ್ಷ ವಯಸ್ಸಿನ ಶಸ್ತ್ರಚಿಕಿತ್ಸಕ ಪ್ರಸ್ತುತ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಿವರ್ ಮತ್ತು ಬಿಲಿಯರಿ ಸೈನ್ಸಸ್ ವಿಭಾಗದ ಅಧ್ಯಕ್ಷರಾಗಿದ್ದಾರೆ.

ಅವರು ಪಾಕಿಸ್ತಾನದಲ್ಲಿ ಡಿಸೆಂಬರ್ 2017 ರಲ್ಲಿ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ