ಬೆಂಗಳೂರು, ಮಾ.12- ಹದ್ದುಮೀರಿ ವರ್ತಿಸುವ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಿ ಎಂದು ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಹಾಗೂ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಡಕ್ ಆದೇಶ ನೀಡಿದ್ದಾರೆ.
ಬೆಂಗಳೂರು ಐಪಿಎಸ್ ಅಸೋಷಿಯೇಷನ್ ಅಧ್ಯಕ್ಷರಾದ ಆರ್.ಪಿ.ಶರ್ಮಾ ಅವರು ಬರೆದಿರುವ ಪತ್ರದ ಬಗ್ಗೆ ಕೆಂಡಾಮಂಡಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ನಿನ್ನೆ ಸಂಜೆ ಹಾಗೂ ಇಂದು ಬೆಳಗ್ಗೆ ಸಭೆ ನಡೆಸಿ ಹದ್ದುಮೀರಿ ವರ್ತಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದ್ದಾರೆ.
ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನನ್ನ ಹತ್ತಿರ ಹೇಳಿ. ಈ ರೀತಿ ಪತ್ರ ಬರೆದು ಸಾರ್ವಜನಿಕವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ನಿಮ್ಮ ಉದ್ದೇಶವಾದರೂ ಏನು ? ಚುನಾವಣೆ ಸಂದರ್ಭದಲ್ಲಿ ಈ ರೀತಿಯ ನಡವಳಿಕೆಯನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು ? ನಿಮ್ಮ ರಾಜಕೀಯ ಅಜೆಂಡಾ ಏನೇ ಇದ್ದರೂ ಅದನ್ನು ಬದಿಗಿಟ್ಟು, ಸರ್ಕಾರಿ ನೌಕರರಾಗಿ ಕೆಲಸ ಮಾಡಿ. ಜನರ ಪರವಾಗಿ ಮೊದಲು ಸೇವೆ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲಸಕ್ಕಿಂತ ವಿವಾದ ಸೃಷ್ಟಿಸುವುದೇ ಹೆಚ್ಚಾಗಿದೆ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಗರಂ ಆದರು. ಅಧಿಕಾರಿಗಳ ಈ ವರ್ತನೆಯ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಿ ಎಂದು ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಹಾಗೂ ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತರ ಮೇಲೆ ದಾಳಿಯೂ ಸೇರಿದಂತೆ ಇತ್ತೀಚೆಗೆ ನಡೆದ ಹಲವಾರು ಕಹಿ ಘಟನೆಗಳಿಂದ ಪೆÇಲೀಸರ ವೃತ್ತಿ ಮತ್ತು ಘನತೆಯನ್ನು ದುರ್ಬಲಗೊಳಿಸಿವೆ ಎಂದು ಬೆಂಗಳೂರು ಐಪಿಎಸ್ ಅಸೋಸಿಯೇಷನ್ ಅಧ್ಯಕ್ಷರಾದ ಆರ್.ಪಿ.ಶರ್ಮಾ ಅವರು ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಬರೆದಿರುವ ಪತ್ರದಲ್ಲಿ ಅಸಮಾಧಾನ ಹೊರ ಹಾಕಿದ್ದರು. ಎಲ್ಲರ ರಕ್ಷಣೆಗೆ ದಾವಿಸುವ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ರಾಜಕೀಯ ಹಸ್ತಕ್ಷೇಪದಿಂದ ಐಪಿಎಸ್ ನೇತೃತ್ವದ ಸಂಸ್ಥೆಗಳ ಘನತೆಗೆ ಧಕ್ಕೆಯಾಗುತ್ತದೆ. ಪದೇ ಪದೇ ಕಮೀಷನರ್ಗಳ ವರ್ಗಾವಣೆಗೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ನಾಲ್ಕೂವರೆ ವರ್ಷದಲ್ಲಿ 6 ಮಂದಿ ಬೆಂಗಳೂರು ಕಮೀಷನರ್ಗಳಾಗಿದ್ದಾರೆ. ಪೆÇಲೀಸ್ ಅಧಿಕಾರಿಗಳು ಅಧಿಕಾರಸ್ಥಾನದ ಜವಾಬ್ದಾರಿಯನ್ನು ಈಡೇರಿಸುವುದರಲ್ಲಿ ಮಾತ್ರ ನಿರತರಾಗಿದ್ದಾರೆಯೇ ಹೊರತು ಸಂವಿಧಾನಬದ್ಧ ಅಧಿಕಾರ ಚಲಾಯಿಸುತ್ತಿಲ್ಲ ಎನ್ನುವುದಕ್ಕೆ ಲೋಕಾಯುಕ್ತರ ಮೇಲಿನ ದಾಳಿ ಸ್ಪಷ್ಟ ಉದಾಹರಣೆಯಾಗಿದೆ.
ಐಪಿಎಸ್ ಅಧಿಕಾರಿಗಳು ತಮ್ಮ ಸಂವಿಧಾನ ಬದ್ಧ ಕರ್ತವ್ಯದ ಹಾದಿ ನಿರ್ಧರಿಸಬೇಕು ಮತ್ತು ಸಾರ್ವಜನಿಕರ ಕಣ್ಣಿನಲ್ಲಿ ಹಾದಿ ತಪ್ಪಿರುವ ಮಾರ್ಗ ಬದಲಾಯಿಸಿ ಕರ್ತವ್ಯವನ್ನು ವೃತ್ತಿಪರವಾಗಿ ನಿರ್ವಹಿಸಬೇಕು ಎನ್ನುವುದು ಐಪಿಎಸ್ ಅಸೋಸಿಯೇಷನ್ ಆಶಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.ತಕ್ಷಣವೇ ಅಸೋಸಿಯೇಷನ್ ಎಲ್ಲಾ ಪದಾಧಿಕಾರಿಗಳ ಸಭೆ ಕರೆಯಬೇಕೆಂದು ಅವರು ಆಗ್ರಹಿಸಿದ್ದರು.
ರಾಜಕೀಯ ಹಸ್ತಕ್ಷೇಪವನ್ನು ಪತ್ರದಲ್ಲಿ ದಾಖಲಿಸಿದ್ದ ಅವರು ಯು.ಬಿ.ಸಿಟಿಯಲ್ಲಿ ನಡೆದ ಘಟನೆ, ಕಾಂಗ್ರೆಸ್ ಕಾರ್ಯಕರ್ತ ನಾರಾಯಣಸ್ವಾಮಿ ಎಂಬುವರಿಂದ ಸರ್ಕಾರಿ ಕಚೇರಿಗೆ ಬೆಂಕಿ ಹಾಕುವ ಬೆದರಿಕೆ, ಐಎಎಸ್ ಅಧಿಕಾರಿ ರಶ್ಮಿ ಮೇಲೆ ಮೈಸೂರಿನಲ್ಲಿ ನಡೆದ ಹಲ್ಲೆ, ಮೈಸೂರಿ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಡೆದ ಆಕ್ರಮಣ ಸೇರಿದಂತೆ ಮುಂತಾದ ಘಟನೆಗಳನ್ನು ಶರ್ಮಾ ಪತ್ರದಲ್ಲಿ ಪ್ರಸ್ಥಾಪಿಸಿದ್ದರು.
ಐಪಿಎಸ್ ಸಂಘದ ಕಾರ್ಯದರ್ಶಿಯಾಗಿರುವ ಪ್ರಣವ್ಮೊಹಂತಿ ಅವರು ದೆಹಲಿಯಲ್ಲಿದ್ದು, ಸಂಘದ ಪದಾಧಿಕಾರಿಗಳ ಜತೆ ಚರ್ಚಿಸದೆ ಶರ್ಮಾ ಅವರು ಈ ರೀತಿ ಪತ್ರ ಬರೆದಿದ್ದಾರೆ ಎಂದು ದೂರವಾಣಿ ಮೂಲಕ ಮುಖ್ಯಮಂತ್ರಿ ಕಚೇರಿಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಸಚಿವಾಲಯ ತಿಳಿಸಿತ್ತು.
ಈ ಎಲ್ಲಾ ಹಿನ್ನೆಲೆಯಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.