ಬೆಂಗಳೂರು,ಮಾ.12- ಅಪಘಾತದಲ್ಲಿ ಮೃತಪಟ್ಟ ಸಿಎ ವಿದ್ಯಾರ್ಥಿ ನೇತ್ರದಾನ ಮಾಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.
ನಂದಿನಿಲೇಔಟ್ನ ಸರಸ್ವತಿಪುರಂನಲ್ಲಿ ವಾಸವಾಗಿದ್ದ ಇಮಾಮ್ ಷಾ ಗರ್ಗ್ (20)ಎಂಬಾತ ಸಿಎ ವಿದ್ಯಾರ್ಥಿನಿಯಾಗಿದ್ದು, ನಿನ್ನೆ ರಾತ್ರಿ ಬುಲೆಟ್ ಬೈಕ್ನಲ್ಲಿ ಬರುತ್ತಿದ್ದಾಗ ರಾಜಾಜಿನಗರ ಸಂಚಾರ ಪೆÇಲೀಸ್ ಠಾಣೆ ವ್ಯಾಪ್ತಿಯ ಪಂಚಮುಖಿ ದೇವಸ್ಥಾನದ ಸಮೀಪದ ಸರಸ್ವತಿಪುರಂ ಮುಖ್ಯರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ.
ಗಂಭೀರ ಗಾಯಗೊಂಡಿದ್ದ ಈತನನ್ನು ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ನಿಮ್ಹಾನ್ಸ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ 1.20ರಲ್ಲಿ ಮೃತಪಟ್ಟಿದ್ದಾನೆ. ರಾಜಾಜಿನಗರ ಸಂಚಾರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನ ಇಚ್ಛೆಯಂತೆ ಆತನ ನೇತ್ರವನ್ನು ಪೆÇೀಷಕರು ದಾನ ಮಾಡಿದ್ದಾರೆಂದು ಪೆÇಲೀಸರು ತಿಳಿಸಿದ್ದಾರೆ.