ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿ
ತುಮಕೂರು, ಮಾ.12- ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಎರಡು ಬಣವೆಗಳು ಹಾಗೂ ಒಂದು ಎಮ್ಮೆ ಸುಟ್ಟು ಹೋಗಿರುವ ಘಟನೆ ಕೊರಟಗೆರೆ ತಾಲ್ಲೂಕಿನ ವಡ್ಡರಗೆರೆ ಗ್ರಾಪಂ ವ್ಯಾಪ್ತಿ ಲಂಬಾಣಿ ತಾಂಡದಲ್ಲಿ ನಡೆದಿದೆ.
ನಿನ್ನೆ ರಾತ್ರಿ 8.15.ಸಮಯದಲ್ಲಿ ಕಿಡಿಗೇಡಿಗಳು ಹುಲ್ಲಿನ ಬಣವೆಗೆ ಬೆಂಕಿ ಇಟ್ಟ ಪರಿಣಾಮ ಲಕ್ಷ್ಮಣ್ ನಾಯ್ಕ ಎಂಬುವರಿಗೆ ಸೇರಿದ ಎರಡು ಬಣವೆಗಳು ಹಾಗೂ ಒಂದು ಎಮ್ಮೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ನಂದಿಸುವಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅನಿತಾ ಪುಟ್ಟರಾಜು ಹಾಗೂ ಸ್ಥಳೀಯರು ಸಹಕರಿಸಿದರು.