ಬೆಂಗಳೂರು,ಮಾ.12- ಬೈಕ್ನಲ್ಲಿ ಬಂದ ದರೋಡೆಕೋರನೊಬ್ಬ ಮಹಿಳೆಯ 100 ಗ್ರಾಂ ಸರ ಎಗರಿಸಿ ಪರಾರಿಯಾಗಿರುವ ಘಟನೆ ಹೆಣ್ಣೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಣ್ಣೂರು ನಿವಾಸಿ ಪದ್ಮಿನಿ ಎಂಬುವರು ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಹೆಣ್ಣೂರು ರಸ್ತೆಯ ಬ್ಯಾಂಕ್ವೊಂದರ ಸಮೀಪದ ಶನಿ ಮಹಾತ್ಮ ದೇವಸ್ಥಾನದ ಬಳಿ ಕ್ಯಾಬ್ಗಾಗಿ ಕಾಯುತ್ತಿದ್ದರು.
ಈ ವೇಳೆ ಬೈಕ್ನಲ್ಲಿ ಬಂದ ದರೋಡೆಕೋರ ಪದ್ಮಿನಿ ಅವರ ಹಿಂಬದಿಯಿಂದ ಕೊರಳಿಗೆ ಕೈ ಹಾಕಿ ಸರ ಎಗರಿಸಿಕೊಂಡು ಪರಾರಿಯಾಗಿದ್ದಾರೆ.
ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಹೆಣ್ಣೂರು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.