ಜಮಖಂಡಿ, ಮಾ.12-ಹೃದಯಾಘಾತದಿಂದ ತಹಸೀಲ್ದಾರ್ ಮೃತಪಟ್ಟಿರುವ ಘಟನೆ ತಾಲೂಕಿನ ತೆರದಾಳ ಪ್ರವಾಸಿ ಮಂದಿರದಲ್ಲಿ ನಡೆದಿದೆ.
ಮೃತರು ತೆರದಾಳ ವಿಶೇಷ ತಹಸೀಲ್ದಾರ್ ಎಸ್.ಎಸ್.ಪೂಜಾರ್ ಎಂದು ತಿಳಿದುಬಂದಿದೆ.
ಪಿಯು ಪರೀಕ್ಷೆಯ ಬಂದೋಬಸ್ತ್ ಹಾಗೂ ಮೇಲ್ವಿಚಾರಣೆ ನೋಡಿಕೊಳ್ಳುವ ಸಲುವಾಗಿ ಕಳೆದ ಎರಡು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದರು.
ನಿನ್ನೆ ಭಾನುವಾರ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿ ರಾತ್ರಿ ಊಟ ಮಾಡಿ ಪ್ರವಾಸಿ ಮಂದಿರದಲ್ಲಿ ಮಲಗಿದ್ದರು. ಇಂದು ಬೆಳಗ್ಗೆ ಅವರು ಕೋಣೆಯಿಂದ ಹೊರಬರದಿದ್ದಾಗ ಅನುಮಾನಗೊಂಡ ಸಿಬ್ಬಂದಿ ಕಿಟಕಿ ಮೂಲಕ ನೋಡಿದಾಗ ಹಾಸಿಗೆ ಮೇಲೆ ಮಲಗಿರುವುದು ಕಂಡುಬಂದಿದೆ.
ಎಷ್ಟು ಕೂಗಿದರೂ ಎಚ್ಚರಗೊಳ್ಳದ ಕಾರಣ ಪೆÇಲೀಸರಿಗೆ ಮಾಹಿತಿ ನೀಡಿ ಬಾಗಿಲು ಒಡೆದು ಒಳಹೋಗಿ ನೋಡಿದಾಗ ಅವರು ಕೊನೆಯುಸಿರೆಳೆದಿರುವುದು ತಿಳಿದು ಆತಂಕಗೊಂಡಿದ್ದಾರೆ.
ತಕ್ಷಣ ವೈದ್ಯರು ಬಂದು ಪರಿಶೀಲನೆ ನಡೆಸಿದಾಗ ಹೃದಯಾಘಾತವಾಗಿರುವುದು ತಿಳಿದುಬಂದಿದೆ.