ಮಂಡ್ಯ, ಮಾ.12- ಸ್ಫೋಟಕ ವಸ್ತು ಹೊಂದಿದ್ದ ನಾಲ್ವರನ್ನು ಪೆÇಲೀಸರು ಬಂಧಿಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋಡಿಶ್ಟೆಟಿಪುರ ಗ್ರಾಮದ ಸರ್ವೆ ನಂ.93ರ ಗ್ರಾಪಂ ಸದಸ್ಯ ಸತ್ಯರಾಜ್ ಎಂಬುವರಿಗೆ ಸೇರಿದ ಕಲ್ಲುಕ್ವಾರಿಯಲ್ಲಿ ಅಕ್ರಮ ಸ್ಫೋಟಕ ಬಳಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಶ್ರೀರಂಗಪಟ್ಟಣದ ಪಿಎಸ್ಐ ಪುನೀತ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಈ ವೇಳೆ ನಾಲ್ವರನ್ನು ಬಂಧಿಸಿದ್ದು, ಬೊಲೆರೋ ವಾಹನ, ಜಿಲೆಟನ್ ಸೇರಿದಂತೆ ಇನ್ನಿತರೆ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.