ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಲಾಭಾಂಶ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದು ವಂಚನೆ

ಬೆಂಗಳೂರು, ಮಾ.12- ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಲಾಭಾಂಶ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದು ವಂಚಿಸಿರುವ ಆರೋಪದ ಮೇಲೆ ಬಂಧಿತರಾಗಿರುವ ಐದು ಮಂದಿ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳು ಈಗ ಪೆÇಲೀಸ್ ವಶದಲ್ಲಿದ್ದಾರೆ. ತನಿಖೆ ತೀವ್ರಗೊಳಿಸಲಾಗಿದೆ. ಈ ಜಾಲದ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಲು ಮೂರು ತಂಡಗಳನ್ನು ರಚಿಸಲಾಗಿದೆ.
ಆರೋಪಿಗಳು ಹೂಡಿಕೆ ಹಣವನ್ನು ಎಲ್ಲಿ ತೊಡಗಿಸಿದ್ದಾರೆ ಹಾಗೂ ಎಷ್ಟು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಬಗ್ಗೆ ಈ ತಂಡಗಳು ಸಮಗ್ರವಾಗಿ ತನಿಖೆ ನಡೆಸುತ್ತಿವೆ ಎಂದು ಅವರು ಹೇಳಿದರು.
ವಿಕ್ರಂ ಇನ್‍ವೆಸ್ಟ್‍ಮೆಂಟ್ ಕಂಪೆನಿಯಲ್ಲಿ ಷೇರಿಗಾಗಿ ಹಣ ತೊಡಗಿಸಿ ಯಾರಾದರೂ ವಂಚನೆಗೊಳಗಾಗಿದ್ದಲ್ಲಿ ಬನಶಂಕರಿ ಠಾಣೆಗಾಗಲಿ ಅಥವಾ ಸ್ಥಳೀಯ ಪೆÇಲೀಸ್ ಠಾಣೆಗಾಗಲಿ ದೂರು ನೀಡಬಹುದು ಎಂದು ಅವರು ತಿಳಿಸಿದ್ದಾರೆ.
ಈ ಕಂಪೆನಿ ಸುಮಾರು 300 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಬಗ್ಗೆ ಆರೋಪವಿದೆ. ತನಿಖೆ ನಡೆಯುತ್ತಿರುವುದರಿಂದ ನಿರ್ದಿಷ್ಟವಾಗಿ ಎಷ್ಟು ಹಣ ವಂಚನೆಯಾಗಿದೆ ಎಂಬ ಬಗ್ಗೆ ಹೇಳಲು ಅಸಾಧ್ಯ ಎಂದು ಡಾ.ಶರಣಪ್ಪ ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ