ದಾವಣಗೆರೆ, ಮಾ.12-ಬುಲೇರೊ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋಬ್ಬ ಗಂಭೀರ ಗಾಯಗೊಂಡಿರುವ ಘಟನೆ ಹೊನ್ನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನಗಿರಿ ತಾಲ್ಲೂಕಿನ ಯಲೋಬಳ್ಳಿಗ್ರಾಮದ ನಿವಾಸಿ ಶ್ರೀನಿವಾಸ್(21) ಮೃತಪಟ್ಟ ಬೈಕ್ ಸವಾರ.
ನಿನ್ನ ಸಂಜೆ ಕುಂದೂರಿನ ದೇವಸ್ಥಾನಕ್ಕೆಂದು ಶ್ರೀನಿವಾಸ ಮತ್ತು ಬಸವನಗೌಡ ಇಬ್ಬರು ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಹನುಮನಹಳ್ಳಿ ಕ್ರಾಸ್ ಬಳಿ ಬುಲೇರೊ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿವೆ.
ಶ್ರೀನಿವಾಸ್ ಸ್ಥಳದಲ್ಲೇ ಸಾವನನ್ಪಿದ್ದಾರೆ. ಬಸವನಗೌಡ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಕಾಡದೇವರ ಮಠ್ ಬುಲೇರೊ ವಾಹನ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.