ಟಿ.ನರಸೀಪುರ, ಮಾ.12- ನಿಯಂತ್ರಣ ಕಳೆದುಕೊಂಡ ಎಸ್ಟೀಮï ಕಾರು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಆಕೆಯ ಪತಿ ಮತ್ತು ಪುತ್ರ ಗಾಯಗೊಂಡಿರುವ ಘಟನೆ ಸಮೀಪದ ಆಲಗೂಡು ಗ್ರಾಮದ ಬಳಿ ನಿನ್ನೆ ಸಂಜೆ ಸಂಭವಿಸಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಕೃಷ್ಣರಾಜ ಕಾನ್ವೆಂಟ್ನಲ್ಲಿ ಮುಖ್ಯ ಶಿಕ್ಷಕಿ ಸ್ನೇಹಾ(28)ಮೃತ ದುರ್ದೈವಿ.
ಸ್ನೇಹಾ ಅವರ ಪತಿ ನಾಗರಾಜು ಹಾಗೂ ಅವರ ಪುತ್ರ ಸ್ಪಂದನ್(14) ಗಾಯಗೊಂಡು ಟಿ.ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರಿನ ತಮ್ಮ ಸಂಬಂಧಿಯೊಬ್ಬರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹನೂರಿಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆಲಗೂಡು ಬಳಿ ಕರೋಹಟ್ಟಿ ಗ್ರಾಮದ ತಿರುವಿನಲ್ಲಿದ್ದ ತಡೆಗೋಡೆಗೆ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಸ್ನೇಹಾ ಅವರಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನಾಗರಾಜು ಕಾರು ಚಾಲನೆ ಮಾಡುತ್ತಿದ್ದರು.
ಈ ಸಂಬಂಧ ಪಟ್ಟಣ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.