ದಿನಾಂಕ 11-03-18 ರಂದು ಸಂಜೆ 6.30ಕ್ಕೆ ಆಲಾಪ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ “ನಾರದ ವಿನೋದ” ಪೌರಣಿಕ ನಾಟಕ ಪ್ರದರ್ಶನ ಮಾಡಲಾಯಿತು.
ನಾಟಕ ಉದ್ಘಾಟನೆಯ ಮುಂಚೆ ನಳಿನಿ ವಿದ್ಯಾಥಿಗಳಿಂದ ಕೂಚಿಪುಡಿ ನೃತ್ಯ ಮಾಡಲಾಯಿತು. ನಂತರ ಶ್ರೀ ಎನ್.ಬಸವರಾಜ್ ಗೌರವ ಕಾರ್ಯದರ್ಶಿಗಳು ರಾಘವ ಮೆಮೋರಿಯಲ್ ಅಸೋಸಿ0iÉುೀಷನ್ ರವರು ನಾಟಕ ಉದ್ಘಾಟನೆಯನ್ನು ನೆರವೇರಿಸಿದರು. ಶ್ರೀ ಎನ್.ಬಸವರಾಜ್ ರವರು ಮಾತನಾಡುತ್ತ ರಂಗಭೂಮಿಯ ಮಹತ್ವ ಅದರ ಹುಟ್ಟು ಬೆಳವಣಿಗೆ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು. ಹಳ್ಳಿಗಳಲ್ಲಿ ಸಮುದಾಯದ ನೆಲೆಗಟ್ಟಿನ ಅಧಾರದ ಮೇಲೆ ಆಯಾ ಧರ್ಮ ಪಂಗಡಗಳ ವಿಧಿ-ವಿಧಾನ ಅಚರಣೆಗಳು ಕ್ರಮೇಣ ತನ್ನ ಸಿದ್ದಾಂತ ಗಳೊಂದಿಗೆ ಸಂಸ್ಕೃತಿಕ ಕಾರ್ಯಕ್ರಮಗಳಾಗಿ ಜನರಿಗೆ ಮನರಂಜನೆ ನೀಡುವ ಮೂಲಕ ಜನಪದ ಹಾಗೂ ವೃತ್ತಿ ಹವ್ಯಾಸವಾಗಿ ತನ್ನ ಬೆಳವಣಿಗೆಯನ್ನು ಹಂತ ಹಂತವಾಗಿ ಬೆಳದು ಬಂದಿರುವುದು ಶ್ಲಾಘನೀಯ, ಇಂತಹ ನಾಟಕಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಆಲಾಪ್ ಸಂಗೀತ ಕಲಾ ಟ್ರಸ್ಟ ಅಂತಹ ಸಂಸ್ಥೆಗಳು ಪೆÇ್ರೀತ್ಸಾಹ ನೀಡುತ್ತಿರುವುದು ಸಂತೋಷದಾಯಕವೆಂದು ನುಡಿದರು. ಮುಖ್ಯ ಅತಿಥಿಗಳಾಗಿ ರಾಘವ ಮೆಮೋರಿಯಲ್ ಅಸೋಸಿ0iÉುೀಷನ್ ಅದ್ಯಕ್ಷರಾದ ಶ್ರೀ ಕೆ.ಕೋಟೇಶ್ವರರಾವ್, ಶ್ರೀ ಬಿ.ಸಿದ್ದನಗೌಡ ಮಾಜಿ ಅಧ್ಯಕ್ಷರು ರಾಘವ ಮೆಮೋರಿಯಲ್ ಅಸೋಸಿ0iÉುೀಷನ್, ಬಳ್ಳಾರಿ ಸಹನಾ ಕಲಾ ಟ್ರಸ್ಟ ಆಧ್ಯಕ್ಷರಾದ ಶ್ರೀ ಪಲ್ಲೇದ ನಾಗರಾಜ್ ಸಿರಿವಾರ ಹಾಗೂ ನಾಟಕ ನಿರ್ದೇಶಕರದ ಡಾ. ಸುಭದ್ರಮ್ಮ ಮನ್ಸೂರು ವೇದಿಕೆ ಹಂಚಿಕೊಂಡರು. ಸಭೆಯ ಆದ್ಯಕ್ಷತೆಯನ್ನು ಶ್ರೀ ಸಿದ್ದರಾಮ ಕಲ್ಮಠ, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಇವರು ಕನ್ನಡ ನಾಟಕಗಳು, ಕಲೆ, ಭಾಷೆ, ಸಂಸ್ಕøತಿಗಳನ್ನು ಉಳಿಸಿ ಬೆಳಿಸುವುದು ನಮ್ಮೆಲ್ಲರ ಕರ್ತವ್ಯ. ನಾಟಕಗಳ ಜನರಿಗೆ ಜೀವನದ ಪಾಠ ಕಲಿಸುವ ಶಿಕ್ಷಣ ಸಂಸ್ಥೆಗಳು ಇದ್ದಂತೆ ಬದುಕಿನ ಅವವ್ಯಸ್ಥೆ ಅಸುನೀಗಿಸಲು ನಾಟಕಗಳು ಸಹಕರಿಸುತ್ತವೆ. ಹೊಸ ರೀತಿಯ ಪ್ರಯೋಗಗಳ ರಂಗಭೂಮಿಯಲ್ಲಿ ಸದಾಕಾಲ ನಡೆಯುತ್ತಿರಬೇಕು. ಬಳ್ಳಾರಿಯಲ್ಲಿ ಹೊಸಪ್ರತಿಭೆಗಳು ರಂಗಭೂಮಿಯನ್ನು ಕ್ರಿಯಾಶೀಲಗೊಳಿಸುವಲ್ಲಿ ಸತತ ಪರಿಶ್ರಮ ಪಡೆಯುತ್ತಿರುವುದು ಸಂತಸದ ವಿಚಾರ ರಂಗಭೂಮಿಗೆ ಕಡೆಗೆ ಪ್ರೇಕ್ಷಕ ಬಂದಾಗ ಮಾತ್ರ ಯಶಸ್ವಿ ಪಡೆಯುತ್ತದೆ. ರಂಗನಟರು ಒಂದು ಭಾಗವಾದರೆ ಪ್ರೇಕ್ಷಕರು ಮತ್ತೊಂದು ಭಾಗ ಎರಡು ಜೊತೆಗೂಡಿದಾಗ ಉತ್ತಮ ರಂಗ ಪ್ರದರ್ಶನ ನಡೆಯಲು ಸಾದ್ಯವೆಂದು ನುಡಿದರು.
ನೃತ್ಯ ಗುರುಗಳಾದ ಶ್ರೀಮತಿ ನಳಿನಿ ಇವರನ್ನು ಸನ್ಮಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಂದ ಪ್ರಾಯೋಜಿತ ಕಾರ್ಯಕ್ರಮದ ಅಡಿಯಲ್ಲಿ ನಾರದ ವಿನೋದ ನಾಟಕ ಪ್ರದರ್ಶನ ಮಾಡಲಾಯಿತು. ಕೃಷ್ಣ ಪಾತ್ರದಲ್ಲಿ ರಮೇಶಗೌಡ ಪಾಟೀಲ್, ರುಕ್ಮಿಣಿ ಪಾತ್ರದಲ್ಲಿ ಶ್ರೀಮತಿ ಅದೋನಿ ವೀಣಾ, ಮಕರಂದ ಪಾತ್ರದಲ್ಲಿ ವಿಜಯ ಅದೋನಿ, ನಾರದ ಪಾತ್ರದಲ್ಲಿ ಅಮರಪುರ ನಾಗರಾಜ್, ನಾಟಕ ನಿರ್ವಹಣೆ : ನೇತಿ ರಘುರಾಮ, ಸಂಗೀತ: ತಿಪ್ಪೇಸ್ವಾಮಿ, ತಬಲ: ಉಮೇಶ ಸಂಡೂರು, ಈ ಎಲ್ಲಾ ಕಲಾವಿದರಿಂದ ನಾಟಕ ಪ್ರದರ್ಶನ ಮಾಡಲಾಯಿತು. ಈ ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಅಣ್ಣಾಜಿ ಕೃಷ್ಣಾರೆಡ್ಡಿ ರಂಗ ನಿರ್ದೇಶಕರು ಇವರು ನಿರ್ವಹಿಸಿದರು. ಟ್ರಸ್ಟ್ ಅಧ್ಯಕ್ಷರಾದ ಬಿ.ರಮಣಪ್ಪ ಸದ್ಯಸರಾದ ಕೆ.ಕೃಷ್ಣ ಮತ್ತು ವಿ.ರಾಮಚಂದ್ರ, ಪಿ.ಎಲ್.ಗಾದಿಲಿಂಗನಗೌಡ ಸುಜಾತಮ್ಮ, ಗಂಗಮ್ಮ ಪಾಟೀಲ್, ಸುಬ್ಬಣ್ಣ ಇನ್ನೂ ಮುಂತಾದವರು ಕಲಾಭಿಮಾನಿಗಳ ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸಿದರು.