ಸೋಲಾರ್ ಟೆಕ್ನಾಲಜಿ ಮಿಷನ್ ಘೋಶಣೆ: 2022ರ ವೇಳೆಗೆ 175 ಗೀಗಾ ವ್ಯಾಟ್ ಹಾಗೂ ಸೌರಶಕ್ತಿಯಿಂದ 100 ಗಿ.ವ್ಯಾ.ವಿದ್ಯುತ್ ಉತ್ಪಾದನೆ ಗುರಿ-ಪ್ರಧಾನಿ

Ahmedabad: Prime Minister Narendra Modi addresses an election campaign rally, at Dhandhuka village of Ahmedabad district on Wednesday. PTI Photo (PTI12_6_2017_000048B)

ನವದೆಹಲಿ, ಮಾ.11-ಭಾರತ ಇಂದು ಸೌರ ಶಕ್ತಿ ಕ್ರಾಂತಿಗೆ ಮುನ್ನುಡಿ ಬರೆದಿದೆ. ಸೌರ ತಂತ್ರಜ್ಞಾನ ಅಭಿಯಾನ (ಸೋಲಾರ್ ಟೆಕ್ನಾಲಜಿ ಮಿಷನ್-ಎಸ್‍ಟಿಎಂ) ಘೋಷಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತವು ನವೀಕರಿಸಬಹುದಾದ ಮೂಲಗಳಿಂದ 2022ರ ವೇಳೆಗೆ 175 ಗೀಗಾ ವ್ಯಾಟ್ ಹಾಗೂ ಸೌರಶಕ್ತಿಯಿಂದ 100 ಗಿ.ವ್ಯಾ.ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ ಎಂದು ಪ್ರಕಟಿಸಿದ್ದಾರೆ.
ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ಅಂತಾರಾಷ್ಟ್ರೀಯ ಸೌರ ಮೈತ್ರಿ(ಇಂಟರ್‍ನ್ಯಾಷನಲ್ ಸೋಲಾರ್ ಅಲೈಯನ್ಸ್-ಐಎಸ್‍ಎ) ಸಂಸ್ಥಾಪನಾ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ, ಮಹತ್ವದ ಸೌರಶಕ್ತಿ ಯೋಜನೆಗಳನ್ನು ಪ್ರಕಟಿಸಿದರು.  ಮಹತ್ವಾಕಾಂಕ್ಷಿ ಸೌರ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗಾಗಿ ರಿಯಾಯಿತಿ ಹಾಗೂ ಕಡಿಮೆ ಹೊಣೆಗಾರಿಕೆಯ ಹಣಕಾಸು ಕ್ರೋಢೀಕರಣಕ್ಕಾಗಿ ಅವರು ಉದ್ಯಮಗಳಿಗೆ ಸಲಹೆ ಮಾಡಿದರು.
10 ಅಂಶಗಳ ಕ್ರಿಯಾ ಅಂಶಗಳನ್ನು ಇದೇ ಸಂದರ್ಭದಲ್ಲಿ ಮೋದಿ ಪ್ರಕಟಿಸಿದರು. ಎಲ್ಲ ದೇಶಗಳಿಗೆ ಕೈಗೆಟುಕುವ ಅತ್ಯಾಧುನಿಕ ಸೌರ ತಂತ್ರಜ್ಞಾನ, ಶಕ್ತಿ ಸಂಪನ್ಮೂಲದಲ್ಲಿ ಫೆÇೀಟೋವೊಲ್ಟಾಯಿಕ್ ಸೆಲ್‍ಗಳಿಂದ ವಿದ್ಯುತ್ ಉತ್ಪಾದನೆ ಪಾಲುದಾರಿಕೆ, ಸರಳು ನಿಬಂಧನೆಗಳು ಮತ್ತು ಉತ್ಕøಷ್ಟ ಗುಣಮಟ್ಟಗಳನ್ನು ರೂಪಿಸುವುದು, ಸೌರಶಕ್ತಿ ಯೋಜನೆಗಳಿಗೆ ಆರ್ಥಿಕ ನೆರವು ಪ್ರಕ್ರಿಯೆಗಳು ಹಾಗೂ ಉತ್ಕøಷ್ಟತೆಗಾಗಿ ಕೇಂದ್ರಗಳ ಜಾಲ ಸೃಷ್ಟಿ ಇವುಗಳು ಈ ಕ್ರಿಯಾ ಯೋಜನೆಯಲ್ಲಿ ಒಳಗೊಂಡಿವೆ.
2030ರ ವೇಳೆಗೆ 1,000 ಗಿ.ವ್ಯಾ ಸೌರ ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಮತ್ತು 1 ಲಕ್ಷ ಕೋಟಿ ಡಾಲರ್ ಬಂಡವಾಳ ಕ್ರೋಢೀಕರಣದ ಗುರಿ ಸಾಧನೆಗಾಗಿ ಇಂಥ ಯೋಜನೆಗಳಿಗೆ ರಿಯಾಯಿತಿ ದರದ ಹಾಗೂ ಹೆಚ್ಚು ಹೊರೆಯಿಲ್ಲದ ಹಣಕಾಸು ನೆರವಿನ ಅಗತ್ಯವಿದೆ ಎಂದು ಮೋದಿ ಪ್ರತಿಪಾದಿಸಿದರು.
ಐಎಸ್‍ಎ ಸದಸ್ಯ ರಾಷ್ಟ್ರಗಳಿಗಾಗಿ 500ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗಾಗಿ ಸೋಲಾರ್ ಟೆಕ್ನಾಲಜಿ ಮಿಷನ್ ಆರಂಭಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.
ಸೌರಶಕ್ತಿಯನ್ನು ಉತ್ಪಾದನೆ ಮತ್ತು ಸದ್ಭಳಕೆ ಮಾಡಿಕೊಳ್ಳಲು ತಮ್ಮ ಸರ್ಕಾರವು ಸಂಪೂರ್ಣ ಬದ್ದವಾಗಿದೆ. ಕಳೆದ ಮೂರು ವರ್ಷಗಳಲ್ಲಿ 28 ಕೋಟಿ ಎಲ್‍ಇಡಿ ಬಲ್ಬ್‍ಗಳನ್ನು ವಿತರಿಸಿ ಆ ಮೂಲಕ 2 ಶತಕೋಟಿ ಡಾಲರ್ (ಸುಮಾರು 13,000 ಕೋಟಿ ರೂ.ಗಳು) ಹಾಗೂ 4 ಗಿ.ವಾ. ವಿದ್ಯುತ್ ಉಳಿಸಿದೆ ಎಂದು ಅವರು ಹೇಳಿದರು.
ನಾವು ವಿಶ್ವದೆಲ್ಲೆಡೆ ಸೌರಕ್ರಾಂತಿಯನ್ನು ಬಯಸುತ್ತೇವೆ. ಎಲ್ಲರೂ ಒಂದಾದರೇ ಸೌರ ಕ್ರಾಂತಿ ಸಾಧಿಸಬಹುದು. ಸೌರ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಹೊಸ ಅನ್ವೇಷಣೆಗಳು ಮತ್ತು ಹೆಚ್ಚಿನ ಅಭಿವೃದ್ಧಿ ಅಗತ್ಯವಿದೆ ಎಂದು ಅವರು ತಿಳಿಸಿದರು.
ನಮ್ಮ ಸೌರ ವಿದ್ಯುತ್ ಯೋಜನೆಗೆ ಸೂರ್ಯ ಪಾಲುದಾರ. ಸೂರ್ಯ ದೇವನು ನಮ್ಮೊಂದಿಗೆ ಪಾಲುದಾರನಾಗಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಸಾಥ್ ನೀಡುತ್ತಿದ್ದಾನೆ ಎಂದು ಪ್ರಧಾನಿ ಬಣ್ಣಿಸಿದರು.  ಭಾರತವು ಸಂಸ್ಥಾಪನಾ ಸಮ್ಮೇಳನದ ಆತಿಥ್ಯ ವಹಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡ ಅವರು, ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಪ್ರಥಮ ಒಪ್ಪಂದ ಆಧಾರಿತ ಅಂತಾರಾಷ್ಟ್ರೀಯ ಅಂತರ್‍ಸರ್ಕಾರಿ ಸಂಘಟನೆಯಾಗಿದೆ. ಇದರ ಕೇಂದ್ರ ಕಚೇರಿ ಬಾರತದಲ್ಲಿ (ಗುರ್‍ಗಾಂವ್) ಇದೆ ಎಂದು ವಿವರಿಸಿದರು.
ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಕೇಂದ್ರ ಸರ್ಕಾರದ ದೂರದೃಷ್ಟಿಯ ಫಲವಾಗಿದೆ. ಸೌರಶಕ್ತಿಯನ್ನು ಸಂಗ್ರಹಿಸಲು ವಿಶ್ವವನ್ನು ಒಗ್ಗೂಡಿಸುವುದು ಮತ್ತು ಜನಸಮುದಾಯಕ್ಕೆ ಕೈಗೆಟುಕುವ ದರದಲ್ಲಿ ಈ ವಿಶ್ವವ್ಯಾಪಿ ಸೌರಶಕ್ತಿ ಸಂಪರ್ಕವನ್ನು ಒದಗಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಉಷ್ಣವಲಯದಲ್ಲಿ ಪೂರ್ಣವಾಗಿ ಅಥವಾ ಭಾಗಶಃ ಸ್ಥಿತವಾಗಿರುವ ಸೌರಶಕ್ತಿ ಸಂಪನ್ಮೂಲಭರಿತ ರಾಷ್ಟ್ರಗಳ ಒಕ್ಕೂಟ ಇದಾಗಿದೆ. ಈ ಉಪಕ್ರಮದ ಮೂಲಕ ಸೌರಶಕ್ತಿ ಬಳಕೆ ಪ್ರಮಾಣವನ್ನು ಹೆಚ್ಚಿಸಲು ಸದಸ್ಯ ರಾಷ್ಟ್ರಗಳು ಸಾಮೂಹಿಕವಾಗಿ ಕಾರ್ಯೋನ್ಮುಖವಾಗಿ ಎದುರಾಗುವ ಪ್ರಮುಖ ಸವಾಲುಗಳನ್ನು ನಿವಾರಿಸಲಿವೆ ಎಂದು ಪ್ರಧಾನಿ ತಿಳಿಸಿದರು.  ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ