ಕೊರಟಗೆರೆ: ಪರಮೇಶ್ವರ್ ಗೆದ್ದರೆ, ರಾಹುಲ್ ಗಾಂಧಿ ಗೆದ್ದಂತೆ, ರಾಹುಲ್ ಗೆದ್ದರೆ ನಾನು ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಕೊರಟಗೆರೆಯ ಸಮಾವೇಶದಲ್ಲಿ ಮಾತನಾಡಿದ ಸಿ.ಎಂ.ಸಿದ್ದಾರಾಮಯ್ಯ, ಇಲ್ಲಿ ಸೇರಿರುವ ಜನಸ್ತೋಮ ನೋಡಿ ನನಗೆ ಸಂತಸವಾಗಿದೆ. ನಾನು ಪರಮೇಶ್ವರ್ ಅಣ್ಣ ತಮ್ಮರಿದ್ದಂತೆ, ಸೂರ್ಯ ಇರುವುದು ಎಷ್ಟು ಸತ್ಯವೂ, ಪರಮೇಶ್ವರ್ ಗೆಲ್ಲುವುದು ಅಷ್ಟೇ ಸತ್ಯ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮತ್ತೆ ಸಿ.ಎಂ.ಆಗುವುದಿಲ್ಲ ಎಂದ ಅವರು, ಅಧಿಕಾರಕ್ಕೆ ಬಂದ ತಕ್ಷಣ ರ್ಯೆತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳುತ್ತಾರೆ, ಅದರೆ
ಅವರ ಸರ್ಕಾರವೆ ಅಧಿಕಾರದಲ್ಲಿದ್ದಾಗ ಯಾಕೆ ಮನ್ನಾ ಮಾಡಲಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬರುವಂತಹ ಪಕ್ಷವಲ್ಲ, ಪ್ರತಿದಿನ ಜೆಡಿಎಸ್ ಪಕ್ಷವನ್ನು ಸರದಿಯಂತೆ ಶಾಸಕರು ಬಿಡುತ್ತಿದ್ದಾರೆ, ಹಳೆ ಮ್ಯೆಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಬಲಿಷ್ಟವಾಗಿದೆ, 25 ಸ್ಥಾನಗಳಿಗಿಂತ ಜಾಸ್ತಿ ಸ್ಥಾನ ಗೆಲ್ಲುವುದಿಲ್ಲ ಎಂದು ಸಮಾವೇಶದಲ್ಲಿ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಆಶೋಕ್ ಖೇಣಿಯವರನ್ನು ಕಾಂಗ್ರೇಸ್ ಸೇರಿಸುಕೊಂಡಿರುವದರ ಬಗ್ಗೆ ಆಸಮಾದಾನ ವ್ಯಕ್ತಪಡಿಸಿದ ಹಿನ್ನಲೆ, ನಾನು ಖರ್ಗೆಯವರ ಜೊತೆ ಮಾತನಾಡುತ್ತೆನೆ ಎಂದು ಹೇಳೀದರು.