ನವದೆಹಲಿ, ಮಾ.11-ಭಾರತಕ್ಕೆ ಇನ್ನೂ 36 ರಫೇಲ್ ಸಮರ ವಿಮಾನಗಳನ್ನು ಪೂರೈಸಲು ಫ್ರಾನ್ಸ್ ಉತ್ಸುಕವಾಗಿದೆ. ಆದರೆ ಈ ಬಗ್ಗೆ ಭಾರತದ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಭಾರತ ಮತ್ತೆ 36 ರಫೇಲ್ ಜೆಟ್‍ಗಳನ್ನು ಖರೀದಿಸುವ ನಿಟ್ಟಿನಲ್ಲಿ ಮಾತುಕತೆ ಆರಂಭಿಸಬಹುದು ಎಂದು ಫ್ರಾನ್ಸ್ ನಿರೀಕ್ಷಿಸಿದೆಯಾದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷರ ಜಂಟಿ ಹೇಳಿಕೆಯಲ್ಲಿ ಈ ವಿಷಯ ಪ್ರಸ್ತಾಪವಾಗಿಲ್ಲ.
2016ರ ಸೆಪ್ಟೆಂಬರ್‍ನಲ್ಲಿ ಸಹಿ ಹಾಕಲಾದ ಒಪ್ಪಂದದಂತೆ ಭಾರತೀಯ ವಾಯು ಪಡೆ(ಐಎಎಫ್) ಈಗಾಗಲೇ 59,000 ಕೋಟಿ ರೂ.ಗಳ ವೆಚ್ಚದಲ್ಲಿ 36 ರಫೇಲ್ ಯುದ್ದ ವಿಮಾನಗಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೆ ಪುನ: ಹೆಚ್ಚುವರಿಯಾಗಿ 36 ಜೆಟ್‍ಗಳನ್ನು ಪೂರೈಸುವ ಬಗ್ಗೆ ಫಾನ್ಸ್ ಆಸಕ್ತಿ ಹೊಂದಿದ್ದರೂ ಸದ್ಯಕ್ಕೆ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.