ಚೆನ್ನೈ,ಮಾ.10-ದೇಶದ ವಿವಿಧೆಡೆ ಭಗ್ನಪ್ರೇಮಿಗಳಿಂದ ಯುವತಿಯರು ಮತ್ತು ವಿದ್ಯಾರ್ಥಿನಿಯರ ಹತ್ಯೆ ಪ್ರಕರಣಗಳು ಮುಂದುವರೆದಿರುವಾಗಲೇ ಚೆನ್ನೈನಲ್ಲಿ ಮತ್ತೊಂದು ಘಟನೆ ಮರುಕಳಿಸಿದೆ.
ತನ್ನನ್ನು ಪೀತಿಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬ ಹತಾಶನಾಗಿ ಕಾಲೇಜು ಮುಂದೆಯೇ ಯುವತಿಯ ಕತ್ತು ಸೀಳಿ ಕೊಲೆಗೈದಿರುವ ಭೀಕರ ಘಟನೆ ಚೆನ್ನೈನ ಕೆ.ಕೆನಗರದಲ್ಲಿ ನಡೆದಿದೆ.
ಮೀನಾಕ್ಷಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಕಾಲೇಜಿನಲ್ಲಿ ಮೊದಲ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಎಂ.ಅಶ್ವಿನಿ(18) ಕೊಲೆಯಾದ ಯುವತಿ.
ಈ ಸಂಬಂಧ ಅಳಗೇಶನ್(26) ಎಂಬಾತನನ್ನು ಬಂಧಿಸಲಾಗಿದೆ.
ಕಾಲೇಜು ಹತ್ತಿರದಲ್ಲೇ ಇರುವ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಅಶ್ವಿನಿಯನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕತ್ತು ಸೀಳಿ ಅಳಗೇಶನ್ ಪರಾರಿಯಾಗುತ್ತಿದ್ದ.
ಈ ಸಂದರ್ಭದಲ್ಲಿ ಯುವಕನೊಬ್ಬ ಆತನನ್ನು ಬಂಧಿಸಿ ಪೆÇಲೀಸರಿಗೆ ಒಪ್ಪಿಸಿದ್ದಾನೆ.
ಕೆಲವು ತಿಂಗಳಿನಿಂದ ಅಶ್ವಿನಿಯನ್ನು ಹಿಂಬಾಲಿಸುತ್ತಿದ್ದ ಈತ ಪ್ರೀತಿಸಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಈತನ ಕಾಟದಿಂದ ಬೇಸತ್ತ ಯುವತಿ ಪೆÇೀಷಕರಿಗೆ ತಿಳಿಸಿದ್ದಳು. ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಪೆÇಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಈ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಅಶ್ವಿನಿ ಕೆಲವು ದಿನಗಳಿಂದ ಕಾಲೇಜಿಗೆ ಹೋಗುತ್ತಿರಲಿಲ್ಲ. ಕಳೆದ ಒಂದು ವಾರದಿಂದೀಚೆಗೆ ಆಕೆ ಮತ್ತೆ ಕಾಲೇಜಿಗೆ ಹೋಗುತ್ತಿದ್ದಳು. ಅಳಗೇಶನ್ ಕೂಡ ಕಳೆದ ವಾರವೇ ಜಾಮೀನಿನ ಮೇಲೆ ಹೊರಬಂದಿದ್ದ.
2016 ಜೂ.24ರಂದು ಚೆನ್ನೈನ ನುಂಗಂ ಬಾಕಂ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಎಂಬುವರನ್ನು ಇದೇ ರೀತಿ ಭಗ್ನ ಪ್ರೇಮಿಯೊಬ್ಬ ಕೊಂದಿದ್ದ. ಚೆನ್ನೈನಲ್ಲಿ ಇದು ನಾಲ್ಕನೇ ಹತ್ಯಾ ಪ್ರಕರಣವಾಗಿದೆ.