ಕೋಲಾರ,ಮಾ.10- ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ಎಎಸ್ಐ ಮತ್ತು ವಾಹನ ಚಾಲಕನನ್ನು ಜಿಲ್ಲಾ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಅವರು ಅಮಾನತುಪಡಿಸಿದ್ದಾರೆ.
ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಠಾಣೆ ಎಎನ್ಐ ಮುನಿರಾಜಪ್ಪ ಹಾಗೂ ಇಲಾಖೆಯ ವಾಹನ ಚಾಲಕ ಅಂಬರೀಶ್ ಅಮಾನತಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮುನಿರಾಜಪ್ಪ ಅವರು ಅಂಬರೀಶ್ ಜತೆ ಸೇರಿ ಲಾರಿಗಳನ್ನು ತಪಾಸಣೆ ನೆಪದಲ್ಲಿ ತಡೆದು ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರು. ಇದನ್ನು ಖುದ್ದಾಗಿ ಗಮನಿಸಿದ ರೋಹಿಣಿ ಕಟೋಚ್ ತಕ್ಷಣ ಜಾರಿಗೆ ಬರುವಂತೆ ಇವರಿಬ್ಬರನ್ನು ಅಮಾನತುಪಡಿಸಿದ್ದಾರೆ.