ಲೋಟಸ್ ಪಾರ್ಟಿಹಾಲ್ನಲ್ಲಿ ಸ್ತ್ರೀ ಶಕ್ತಿ ಉತ್ಸವ
ಬೆಂಗಳೂರು, ಮಾ.10- ವಿಡಿಎಂ ಇಂಡಿಯಾ ಆನ್ ಮೂವ್ ವತಿಯಿಂದ ಸ್ತ್ರೀ ಶಕ್ತಿ ಉತ್ಸವವನ್ನು ನಾಳೆ ಬೆಳಗ್ಗೆ 9.30ಕ್ಕೆ ಎನ್ಆರ್ಐ ಲೇಔಟ್ನ ಲೋಟಸ್ ಪಾರ್ಟಿಹಾಲ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ಉಪಾಧ್ಯಕ್ಷೆ ಆರ್.ನೀರಜಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡೆ, ರಾಜಕೀಯ, ಶಿಕ್ಷಣ, ಸಂಗೀತ, ನೃತ್ಯ, ಚಿತ್ರಕಲೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಮಹಿಳಾ ಸೈಬರ್ ಅಪರಾಧ ತನಿಖಾಧಿಕಾರಿ ಧನ್ಯಾ ಮೆನನ್, ಬಿಜಿಎಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಅಯ್ಯಪ್ಪ ನಾಯರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.