ಬೆಂಗಳೂರು, ಮಾ.10- ಭಾರತದ ಶ್ರೇಷ್ಠ ಟಿವಿ ವಾಹಿನಿಯಾದ ಸೋನಿ ಬಿಬಿಸಿ ಅರ್ತ್ ಫೀಲ್ ಲೈವ್ ಅವರ್ಸ್ ಎಂಬ ಒಂದು ವಿಶಿಷ್ಟ ಕಾರ್ಯಕ್ರಮದ ಮೂಲಕ ಬೆಂಗಳೂರಿನ ಜೀವಕಳೆಯ ಅನಾರವಣ ಪ್ರದರ್ಶಿಸಲಿದೆ.
ಬಿಬಿಸಿ ಇತ್ತೀಚೆಗೆ ಒಂದು ಜಗದ್ವ್ಯಾಪಿ ಸಂಶೋಧನೆ ನಡೆಸಿತು. ನಿಸರ್ಗದ ಸಂಪರ್ಕದಲ್ಲಿದ್ದರೆ ನಮಗೆ ಆನಂದ ಲಭಿಸುತ್ತದೆ ಎಂಬುದನ್ನು ಪತ್ತೆಮಾಡಿತ್ತು. ಜನರನ್ನು ಭರ್ಜರಿಯಾದ ದೃಶ್ಯಗಳು ಮತ್ತು ಇತ್ಯಾತ್ಮಕ ಹಾಗೂ ಒಳನೋಟವುಳ್ಳ ಕಥೆಗಳ ಮೂಲಕ ನಿಸರ್ಗದ ಜೊತೆ ಸಂಪರ್ಕಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಫೀಲ್ ಅಲೈವ್ ಅವರ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
, ಅನೇಕ ನಗರಗಳಲ್ಲಿ ಶಾಲಾ-ಕಾಲೇಜುಗಳು, ಕಛೇರಿಗಳು, ಮಾಲ್ಗಳು ಇತ್ಯಾದಿ ಸಂಪರ್ಕ ಕೇಂದ್ರಗಳ ಮೂಲಕ ಈ ಗುರಿಯನ್ನು ಸಾಧಿಸಲು ಯತ್ನಿಸುತ್ತಿದ್ದು, ಬೆಂಗಳೂರಿನಲ್ಲಿ ಸುಮಾರು 60 ಸಾವಿರ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮ ತಲುಪಲಿದ್ದು, ಇನ್ನೂ ದೆಹಲಿ, ಮುಂಬೈ, ಮತ್ತು ಕೋಲ್ಕತಾದಲ್ಲೂ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಮುಂಬೈನ ಯುವ ಮನಸ್ಸುಗಳನ್ನು ನಮ್ಮ ವಿಶ್ವದ ಅಚ್ಚರಿಗಳತ್ತ ತಿರುಗಿಸುತ್ತದೆ. ವಿದ್ಯಾರ್ಥಿಗಳು ವಿನೋದಭರಿತ ವಿಜ್ಞಾನ ಪ್ರಯೋಗಗಳಲ್ಲಿ, ರಸಪ್ರಶ್ನೆಗಳಲ್ಲಿ, ಭಾಗವಹಿಸುತ್ತಾರೆ. ಇದರಲ್ಲೆಲ್ಲ ಅದ್ಭುತವಾದ, ಹಿಂದೆಂದೂ ಕಂಡಿರದಂತಹ ವಿಷಯವಸ್ತುಗಳಿರುತ್ತವೆ ಮತ್ತು ಪ್ರತಿಯಾಗಿ ವಿದ್ಯಾರ್ಥಿಗಳಿಗೆ ಬಹಳಷ್ಟು ರುಚಿಯಾದ ತಿನಿಸುಗಳೂ ಸಿಗುತ್ತವೆ.
ನಾನೂ ಓರ್ವ ತಾಯಿ. ಮಕ್ಕಳು ನಿಸರ್ಗದ ಜೊತೆ ಜೊತೆಗೇ ಬೆಳೆಯುವುದರ ಮಹತ್ತ್ವವನ್ನು ನಾನು ಅರಿತಿದ್ದೇನೆ. ಫೀಲ್-ಅಲೈವ್ ಅವರ್ಸ್ ಒಂದು ಉತ್ತಮ ಪ್ರಯತ್ನ. ಮುಂಬರುವ ವರ್ಷಗಳಲ್ಲಿ ಇದು ಭಾರತಾದ್ಯಂತ ಹರಡಬೇಕೆಂಬುದು ನನ್ನ ಆಶಯವಾಗಿದೆ ಎಂದು ನಿಸರ್ಗ ಪ್ರಿಯರಾದ ಟಿವಿ ನಿರೂಪಕಿ ಮತ್ತು ತಾಯಿ ಎ.ದಿ ಮಾರಿಯಾ ಗೊರೆಟ್ಟಿ ಹೇಳುತ್ತಾರೆ.
ನಿಮ್ಮ ಶಾಲೆಗೂ ಸೋನಿ ಬಿಬಿಸಿ ಅರ್ತ್ನ ಫೀಲ್ ಅಲೈವ್ ಕಾರ್ಯಕ್ರಮವು ಬರಬೇಕೆಂದಿದ್ದರೆ 1800-315-7849 ಸುಮ್ಮನೆ ನಮಗೊಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು.