ಬೆಂಗಳೂರು. ಮಾ.10- ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಕುಖ್ಯಾತ ಅತ್ಯಾಚಾರಿ ಮತ್ತು ಹಂತಕ ಸೈಕೋ ಜೈಶಂಕರ್ ಪ್ರಕರಣದ ಸಂಬಂಧ ರಾಜ್ಯ ಪೆÇಲೀಸ್ ಮಹಾ ನಿರೀಕ್ಷಕರಿಗೆ (ಬಂಧೀಖಾನೆಗಳು) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಅರ್ಸಿ) ನೋಟಿಸ್ ಜಾರಿಗೊಳಿಸಿದೆ. ಈ ಘಟನೆ ಬಗ್ಗೆ ಆರು ವಾರಗಳ ಒಳಗೆ ಸವಿವರ ವರದಿ ನೀಡುವಂತೆ ಸೂಚಿಸಿದೆ. ಇದರೊಂದಿಗೆ ಈ ಪ್ರಕರಣ ಈಗ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಕಾರಣವಾದಂತಾಗಿದೆ.
ಅತ್ಯಾಚಾರ, ಕೊಲೆ ಮೊದಲಾದ ಗಂಭೀರ ಆಪರಾಧಗಳಿಗಾಗಿ ಕಳೆದ 10 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಜೈಶಂಕರ್(38) ಫೆ.27ರಂದು ಕಾರಾಗೃಹದ ಒಳಗೇ ಶೇವಿಂಗ್ ಬ್ಲೇಡ್ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಐಜಿ(ಕಾರಾಗೃಹಗಳು) ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಆರು ವಾರಗಳ ಒಳಗೆ ಈ ಘಟನೆ ಸಂಬಂಧ ವಿವರವಾದ ವರದಿ ನೀಡುವಂತೆ ಸೂಚಿಸಿದೆ ಎಂದು ಎನ್ಎಚ್ಆರ್ಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಪೆÇಲೀಸ್ ಇಲಾಖೆ ಈ ಸಂಬಂಧ ಸಲ್ಲಿಸುವ ವರದಿ ಆಧಾರದ ಮೇಲೆ ಆಯೋಗವು ಮುಂದಿನ ಕ್ರಮ ಕೈಗೊಳ್ಳಲಿದೆ.
ಮಾರ್ಗಸೂಚಿಗಳ ಪ್ರಕಾರ ಇಂಥ ಸಾವು ಸಂಭವಿಸಿದ 24 ಗಂಟೆ ಒಳಗೆ ಆಯೋಗಕ್ಕೆ ಮಾಹಿತಿ ನೀಡಬೇಕು. ಆದರೆ ಜೈಲಿ ಅಧಿಕಾರಿ ಹಾಗೂ ರಾಜ್ಯದ ಸಂಬಂಧಪಟ್ಟ ಉನ್ನತಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿಲ್ಲ. ಇದು ಕಾನೂನು ಉಲ್ಲಂಘನೆಯಾಗಿದ್ದು, ಈ ಸಂಬಂಧ ಸ್ಪಷ್ಟೀಕರಣ ನೀಡುವಂತೆಯೂ ಪೆÇಲೀಸ್ ಮಹಾ ನಿರೀಕ್ಷಕರಿಗೆ ಆಯೋಗ ಸ್ಪಷ್ಟ ಸೂಚನೆ ನೀಡಿದೆ. ಇದರಿಂದ ರಾಜ್ಯ ಪೆÇಲೀಸ್ ಇಲಾಖೆಗೆ ಇರಿಸುಮುರಿಸು ಉಂಟಾಗಿದೆ. ಮಾಧ್ಯಮಗಳ ವರದಿ ಆಧರಿಸಿ ಆಯೋಗವು ಸುಮೋಟೊ ಕೇಸ್ ದಾಖಲಿಸಿದೆ.
ಸೈಕೋ ಜೈಶಂಕರ್ ವಿರುದ್ದ ಅತ್ಯಾಚಾರ ಮತ್ತು ಕೊಲೆ ಸಂಬಂಧ 15 ಪ್ರಕರಣಗಳಿವೆ. ಇವುಗಳಲ್ಲಿ ಮೂರು ಪ್ರಕರಣಗಳಲ್ಲಿ ಆತ ಶಿಕ್ಷೆಗೆ ಗುರಿಯಾಗಿದ್ದಾನೆ. ಇತರ ಕೈದಿಗಳಿಂದ ಆತನಿಗೆ ಜೀವ ಬೆದರಿಕೆ ಇದ್ದ ಕಾರಣ ಪರಪ್ಪನ ಜೈಲಿನಲ್ಲಿ ಪ್ರತ್ಯೇಕ ಸೆಲ್ನಲ್ಲಿ ಇರಿಸಲಾಗಿತ್ತು. ಈ ಮಧ್ಯೆ, ಫೆ.27ರಂದು ಕಾರಾಗೃಹದಲ್ಲೇ ಜೈಶಂಕರ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಬಂಧೀಖಾನೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಭದ್ರತಾ ಮತ್ತು ಕರ್ತವ್ಯ ಲೋಪದ ಬಗ್ಗೆ ಆಯೋಗ ಆಸಮಾಧಾನ ವ್ಯಕ್ತಪಡಿಸಿದೆ.
ಜೈಶಂಕರ್ ಖಿನ್ನತೆ ಮತ್ತು ಮಾನಸಿಕ ಕ್ಷೋಭೆಗೆ ಒಳಗಾಗಿದ್ದನು ಎಂಬುದು ವಿಚಾರಣೆಯಿಂದ ತಿಳಿದು ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಜೈಲಿನ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಬಗ್ಗೆ ಆಯೋಗ ತೀವ್ರ ಅತೃಪ್ತಿ ಸೂಚಿಸಿದೆ.
ತಮಿಳುನಾಡಿನಲ್ಲಿ ಅತ್ಯಾಚಾರ ಮತ್ತು ಪೆÇಲೀಸ್ ಪೇದೆ ಹತ್ಯೆ ನಂತರ ತೀವ್ರ ಶೋಧದ ಬಳಿಕ 2009ರಲ್ಲಿ ಜೈಶಂಕರ್ನನ್ನು ಬಂಧಿಸಲಾಗಿತ್ತು. 2013ರಲ್ಲಿ ಆತ ಜೈಲಿನ ಗೋಡೆ ಏರಿ ಪರಾರಿಯಾಗಿದ್ದ. ತರುವಾಯ ಆತನನ್ನು ಮತ್ತೆ ಬಂಧಿಸಲಾಗಿತ್ತು. ಅಗಿನಿಂದಲೂ ಜೈಶಂಕರ್ನನ್ನು ಭಾರಿ ಭದ್ರತೆಯ ಸೆಲ್ನಲ್ಲಿ ಇರಿಸಲಾಗಿತ್ತು.