ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡಬೇಕು, ಬಿಜೆಪಿ ಅಧಿಕಾರಕ್ಕೆ ತರಬೇಕು – ಜಯನಗರ ಶಾಸಕ ವಿಜಯ್ ಕುಮಾರ್

ಬೆಂಗಳೂರು ಮಾ 10: ಇಂದು ಜಯನಗರ ಬಿಡಿಎ ಕಾಂಪ್ಲೆಕ್ಸ್ ಬಳಿ ಬಿಜೆಪಿಯ ಬೆಂಗಳೂರು ರಕ್ಷಿಸಿ ಸಮಾರೋಪ. ಶಾಸಕ ಬಿ ಎನ್ ವಿಜಯ್ ಕುಮಾರ್ ರವರು ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕೆಲಸಗಳು ಆಗುತ್ತಿಲ್ಲ, ಕಸದ ಸಮಸ್ಯೆ ನಿವಾರಣೆ ಮಾಡೋದಕ್ಕೆ ಆಗುತ್ತಿಲ್ಲ. ಡ್ರಗ್ಸ್ ಮಾಫಿಯಾ ಹೆಚ್ಚಿದ್ದು ಇರಾನಿಗಳು ಮತ್ತು ಸೌತ್ ಆಫ್ರಿಕಾದ ದಿಂದ ಬಂದು ಡ್ರಗ್ ಮಾಫಿಯಾ ನಡೆಸುತ್ತಿದ್ದಾರೆ. ಅವರು ನಿಮ್ಮ ಮಕ್ಕಳು ತಿನ್ನೋ ಸೌತೆಕಾಯಿ, ಪಾನಿ ಪುರಿ ಎಲ್ಲದ್ರಲ್ಲೂ ಡ್ರಗ್ಸ್ ಹಾಕಿ ಮಾರುತ್ತಿದ್ದಾರೆ. ಆರ್ಗಾನಿಕ್ ಡ್ರಗ್ಸ್ ಮಕ್ಕಳ ದೇಹ ಸೇರುತ್ತಿದೆ ಎಂದರು.

ಕೆ. ಆರ್ ಪುರಂ ಕ್ಷೇತ್ರದಲ್ಲಿ ೧೧೮ ಕೊಲೆಗಾಳಾಗಿವೆ. ಒಂದು ಕ್ಷೇತ್ರದಲ್ಲಿ ಅಷ್ಟೊಂದು ಕ್ರೈಂ ನಡೆಯುತ್ತಿದ್ರು ತಡೆಯೋ ಕೆಲಸ ಮಾಡುತ್ತಿಲ್ಲ. ಸಿಎಂ ಆಪ್ತ ಶಾಸಕನ ಕ್ಷೇತ್ರದಲ್ಲಿ ಈ ರೀತಿ ನಡೆಯುತ್ತಿದೆ. ಜಯನಗರದಲ್ಲಿ, ಸ್ಕಿಲ್ ಗೇಮ್ಸ್ ಇದೆ, ಹುಕ್ಕಾ ಬಾರ್ಗಳಿವೆ ಅವುಗಳನ್ನ ತಡೆಯೋ ಕೆಲಸ ಮಾಡುತ್ತಿಲ್ಲ. ಬೆಂಗಳೂರು ಉಳಿಸೋದಕ್ಕೆ ಈ ಸರ್ಕಾರ ವನ್ನ ಕಿತ್ತೋಗೆಯ ಬೇಕು ಮೋದಿ ಹೇಳುತ್ತಾರೆ, ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ. ಆ ನಿಟ್ಟಿನಲ್ಲಿ ನಾವೇಲ್ಲ ಕೆಲಸ ಮಾಡಬೇಕು ಎಂದು ಶಾಸಕ ವಿಜಯ್ ಕುಮಾರ್ ರವರು ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಅಶೋಕ್ ರವರು ಮಾತನಾಡಿ, ಸಿಎಂ ಸಿದ್ದರಾಮಯ್ಯ ಬೆಂಗಳೂರಿನವರಲ್ಲ. ಇಲ್ಲಿ ಸೋತ್ರೆ ಸಿದ್ದರಾಮನ ಹುಂಡಿಗೆ ಹೋಗ್ತಾರೆ. ನಾವು ಇಲ್ಲೇ ಇರಬೇಕು, ಇಲ್ಲೇ ಸಾಯಬೇಕು. ಇವರಿಗೆ ಬೆಂಗಳೂರು ಬೇಕಿರೋದು ಎಟಿಎಂಗಾಗಿ. ವೈಟ್ ಟ್ಯಾಪಿಂಗ್ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ.

ಸರಗಳ್ಳರು ಹೆಚ್ಚಾಗಿದ್ದಾರೆ, ಸರಗಳ್ಳರು ಮುಂಚೆ ಸಾಮನ್ಯ ಜನರ ಸರಗಳ್ಳತನ ಮಾಡುತ್ತಿದ್ರು. ಈಗ ಅವರಿಗೂ ಬೇಜಾರಾಗಿ ಪೊಲೀಸ್ ಕಮೀಷನ್ ಹೆಂಡತಿಯ ಸರ ಕಿತ್ತುಕೊಂಡು ಹೋದ್ರು.
ಸರಗಳ್ಳರ ಅಸೋಸಿಯೇಷನ್ ತೀರ್ಮಾನ ದಂತೆ ಪೊಲೀಸರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಶಿಲ್ಪಾ ಶ್ರೀಧರ್ ಗಂಡ ಕೃಷ್ಣಮೂರ್ತಿಗೆ ಸೂಪಾರಿ ಕೊಟ್ಟಿದ್ದಾರೆ. ಪೊಲೀಸರಿಗೆ ಡೈರೆಕ್ಷನ್ ನೀಡಿದ್ದಾರೆ. ಇನ್ನೇಷ್ಟು ಬಿಜೆಪಿ ಕಾರ್ಯಕರ್ತರ ಕೊಲೆಗಳು ಆಗಬೇಕು ಎಂದು ಅಶೋಕ್ ರವರು ಪ್ರಶ್ನಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ