ಜಮ್ಮು, ಮಾ.10- ಪಾಕಿಸ್ತಾನಿ ಸೇನಾ ಪಡೆಗಳು ಗಡಿ ಪ್ರದೇಶದಲ್ಲಿ ಮತ್ತೆ ಪುಂಡಾಟ ಮುಂದುವರಿಸಿವೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಮುಂಚೂಣಿ ನೆಲೆಗಳು ಮತ್ತು ಗ್ರಾಮಗಳ ಮೇಲೆ ಪಾಕ್ ಯೋಧರು ಭಾರೀ ಶೆಲ್ ದಾಳಿ ನಡೆಸಿದ್ಧಾರೆ.
ಮನ್ಕೋಟ್ ವಲಯದ ಗಡಿ ಭಾಗದಲ್ಲಿ ಬೆಳಗ್ಗೆ 7.30ರಲ್ಲಿ ಪಾಕ್ ಸೇನಾಪಡೆ ಭಾರೀ ಶೆಲ್ ದಾಳಿ ನಡೆಸಿತು. ಭಾರತೀಯ ಯೋಧರು ಪ್ರತಿದಾಳಿ ನಡೆಸಿ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ಕೆಲಕಾಲ ಗುಂಡಿನ ಕಾಳಗ ನಡೆಯಿತು. ಸಾವು-ನೋವಿನ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವರ್ಷದ ಆರಂಭದಿಂದ ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದಿಂದ ನಿರಂತರ ಕದನ ವಿರಾಮ ಉಲ್ಲಂಘನೆಯಾಗಿದೆ. ಅಪ್ರಚೋದಿತ ದಾಳಿಯಲ್ಲಿ 12 ಯೋಧರೂ ಸೇರಿದಂತೆ 21 ಮಂದಿ ಮೃತಪಟ್ಟಿದ್ದಾರೆ.