ಜಮ್ಮು,ಮಾ.10- ಹದಿನೇಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧ ಪ್ರಕರಣವೊಂದರ ಆರೋಪಿ ಕೊನೆಗೂ ಪೆÇಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಖಚಿತ ಸುಳಿವಿನ ಮೇರೆಗೆ ಕಾರ್ಯಪ್ರವೃತ್ತರಾದ ಪೆÇಲೀಸರು ಅಪರಾಧಿ ಅಶ್ವನಿ ಶರ್ಮಾ ಎಂಬಾತನನ್ನು ಜಮ್ಮುವಿನ ಹುರಾನ್ ಕುಂಡ್ ಪ್ರದೇಶದಲ್ಲಿ ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಶರ್ಮಾ 2001ರಲ್ಲಿ ಎಸಗಿದ ಅಪರಾಧ ಕೃತ್ಯದಲ್ಲಿ ಪೆÇಲೀಸರಿಗೆ ಬೇಕಾಗಿದ್ದ. ಆದರೆ ಕಳೆದ 17 ವರ್ಷಗಳಿಂದ ಆತ ತಲೆ ಮರೆಸಿಕೊಂಡಿದ್ದ. ಕೋರ್ಟ್ ಆತನ ವಿರುದ್ಧ ವಾರೆಂಟ್ ಜಾರಿ ಮಾಡಿತ್ತು.