ಬೆಂಗಳೂರು, ಮಾ.10- ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ವದಂತಿಯಂತೆ ಕಳೆದ ರಾತ್ರಿ 18 ಹಿರಿಯ ಐಪಿಎಸ್ ಅಧಿಕಾರಿಗಳನ್ನು ಚುನಾವಣಾ ಆಯೋಗದ ಅನುಮತಿಯಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ 15 ದಿನಗಳಿಂದ ಪೆÇಲೀಸ್ ವಲಯದಲ್ಲಿ ಭಾರೀ ವರ್ಗಾವಣೆಯಾಗುವ ಮಾಹಿತಿ ಹರಿದಾಡುತ್ತಿತ್ತು. ಆದರೆ, ಅದನ್ನು ಗೌಪ್ಯವಾಗಿಡಲಾಗಿತ್ತು. ಅಚ್ಚರಿ ಎಂಬಂತೆ ಮಧ್ಯರಾತ್ರಿ ಆದೇಶ ಪ್ರತಿ ಹೊರಬಿದ್ದಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ:
1. ಬಿ.ದಯಾನಂದ್- ಐಜಿಪಿ- ಕೇಂದ್ರ ವಲಯ
2. ಅಮ್ರಿತ್ ಪೌಲ್- ಐಜಿಪಿ- ಆಡಳಿತ, ಬೆಂಗಳೂರು
3. ಉಮೇಶ್ಕುಮಾರ್- ಐಜಿಪಿ- ಗೃಹ ಇಲಾಖೆ ಕಾರ್ಯದರ್ಶಿ
4. ಸೌಮೇಂದ್ರ ಮುಖರ್ಜಿ-ಐಜಿಪಿ- ದಕ್ಷಿಣ ವಲಯ, ಮೈಸೂರು
5. ಎಸ್.ರವಿ- ಐಜಿಪಿ- ಬಳ್ಳಾರಿ ವಲಯ
6. ವಿಪುಲ್ಕುಮಾರ್- ಐಜಿಪಿ- ನಿರ್ದೇಶಕರು, ಕರ್ನಾಟಕ ಪೆÇಲೀಸ್ ಅಕಾಡೆಮಿ, ಮೈಸೂರು
7. ಎಂ.ಶಿವಪ್ರಕಾಶ್- ಐಜಿಪಿ- ನಿರ್ದೇಶಕರು, ಭದ್ರತೆ ಮತ್ತು ಜಾಗೃತ ದಳ ಕೆಎಸ್ಆರ್ಟಿಸಿ, ಬೆಂಗಳೂರು
8. ಅಮಿತ್ಸಿಂಗ್- ಎಸ್ಪಿ- ಮೈಸೂರು
9. ಎಂ.ಎನ್.ಅನುಚೇತ್- ಎಸ್ಪಿ- ಸಿಐಡಿ, ಬೆಂಗಳೂರು
10. ರವಿ ಡಿ.ಚನ್ನಣ್ಣನವರ್- ಡಿಸಿಪಿ- ಪಶ್ಚಿಮ ವಿಭಾಗ, ಬೆಂಗಳೂರು
11. ಕುಲದೀಪ್ ಕುಮಾರ್ ಆರ್. ಜೈನ್- ಕಮಾಂಡೆಂಟ್- 9ನೆ ಕೆಎಸ್ಆರ್ಪಿ, ಬೆಟಾಲಿಯನ್
12. ವಿಕ್ರಮ್ ಪ್ರಕಾಶ್ ಅಮ್ರಿತ್- ಎಸ್ಪಿ- ವಿಜಯಪುರ ಜಿಲ್ಲೆ
13. ಡಾ.ಭೀಮಾಶಂಕರ್ ಎಸ್. ಗುಳೇದ್- ಎಸ್ಪಿ- ಬೆಂಗಳೂರು ಗ್ರಾಮಾಂತರ ಜಿಲ್ಲೆ
14. ಜಿ.ರಾಧಿಕಾ- ಎಸ್ಪಿ- ಎಸಿಬಿ, ಬೆಂಗಳೂರು
15. ಡಾ.ಅನೂಪ್ ಶೆಟ್ಟಿ- ಎಸ್ಪಿ- ಗುಪ್ತಚರ ಇಲಾಖೆ, ಬೆಂಗಳೂರು
16. ರೇಣುಕ ಕೆ. ಸುಕುಮಾರ್- ಎಸ್ಪಿ- ಕೊಪ್ಪಳ ಜಿಲ್ಲೆ
17. ಎಸ್.ಗಿರೀಶ್- ಎಸ್ಪಿ- ಮಂಡ್ಯ ಜಿಲ್ಲೆ
18. ಕಲಾ ಕೃಷ್ಣಮೂರ್ತಿ- ಡಿಸಿಪಿ- ಈಶಾನ್ಯ ವಿಭಾಗ, ಬೆಂಗಳೂರು