ಮಂಡ್ಯ, ಮಾ.10-ಬಸವ ಸಮಿತಿ ಯೋಜನೆಗೆ ಆಯ್ಕೆ ಸಂಬಂಧ ಲಂಚಕ್ಕೆ ಪೀಡಿಸುತ್ತಿದ್ದ ಉಪ್ಪರಕಾನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹಂಪಾಪುರ ನಿವಾಸಿಯಾದ ಅಧ್ಯಕ್ಷೆ ಪದ್ಮಾ ಅವರು ಅದೇ ಗ್ರಾಮದ ಪುಟ್ಟರಾಜು ಅವರಿಂದ ಈ ಮೊದಲು 10 ಸಾವಿರ ಲಂಚ ಪಡೆದಿದ್ದರು. ಪುನಃ 15 ಸಾವಿರ ಕೊಟ್ಟರೆ ನಿನ್ನೆ ಹೆಸರನ್ನು ಬಸವ ಸಮಿತಿ ಯೋಜನೆ ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಸೇರಿಸುವುದಾಗಿ ಹೇಳಿ ಲಂಚಕ್ಕೆ ಪೀಡಿಸುತ್ತಿದ್ದರು.
ಇದರಿಂದ ಬೇಸತ್ತ ಪುಟ್ಟರಾಜು ಎಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಸತೀಶ್ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಎಸಿಬಿ ತಂಡ, ಗ್ರಾ.ಪಂ. ಅಧ್ಯಕ್ಷೆ ಪದ್ಮಾ ಅವರು ಲಂಚ ಪಡೆಯುವ ವೇಳೆ ಬಂಧಿಸಿದೆ.