ನವದೆಹಲಿ ,ಮಾ.10- ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಒಂದು ವೇಳೆ ಸೈನಿಕರು ಹುತಾತ್ಮರಾದರೆ ಅಥವಾ ಗಾಯಗೊಂಡರೆ ಅವರ ಕುಟುಂಬಗಳಿಗೆ ಶೇ. 100 ರಷ್ಟು ಪಿಂಚಣಿ ಸೌಲಭ್ಯ ನೀಡಲಾಗುತ್ತದೆ.
ಈ ವರೆಗಿನ ನಿಯಮಗಳ ಪ್ರಕಾರ ಯೋಧರಿಗೆ ಅವರು ಕೊನೆಯ ಬಾರಿ ಪಡೆದ ವೇತನದ ಶೇ.30ರಷ್ಟು ಮಾತ್ರವೇ ಅವರಿಗೆ ಪಿಂಚಣಿಯಾಗಿ ಸಿಗುತ್ತಿತ್ತು. ಇದೀಗ ಉದಾರೀಕೃತ ಕುಟುಂಬ ಪಿಂಚಣಿಯು ಅವರಿಗೆ ಶೇ.100 ಪಿಂಚಣಿಯನ್ನು ಪಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
ಶೇ.100 ಪಿಂಚಣಿ ಪಡೆಯುವ ಭಾಗ್ಯ ಈ ತನಕ ಪಾಕಿಸ್ಥಾನದ ಅಂತಾರಾಷ್ಟ್ರೀಯ ಗಡಿಯಲ್ಲಿ ಮೃತಪಡುವ ಅಥವಾ ಗಾಯಗೊಳ್ಳುವ ಯೋಧರಿಗೆ ಮಾತ್ರವೇ ಅನ್ವಯಿಸುತ್ತಿತ್ತು. ಇದೀಗ ಈ ಉದಾರೀಕೃತ ಪಿಂಚಣಿಯನ್ನು ಸರಕಾರ ಚೀನದೊಂದಿಗೆ ಭಾರತ ಗಡಿ ರಕ್ಷಣೆಯಲ್ಲಿರುವ ಭಾರತೀಯ ಯೋಧರಿಗೂ ಅನ್ವಯಿಸಿದೆ.