ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್)ದ ಎರಡನೇ ನಾಯಕರಾಗಿ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗುವುದು ಬಹುತೇಕ ಖಚಿತ

ನಾಗ್ಪುರ ಮಾ.10-ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್)ದ ಎರಡನೇ ನಾಯಕರಾಗಿ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ನಾಗಪುರದಲ್ಲಿ ಆರಂಭವಾಗಿರುವ ಆರ್‍ಎಸ್‍ಎಸ್‍ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಪ್ರಸ್ತುತ ಬೈಯಾಜಿ ಜೋಷಿ ಆರ್‍ಎಸ್‍ಎಸ್ ಸರ್ಕಾರ್ಯಾವ್ಹ( ಪ್ರಧಾನ ಕಾರ್ಯದರ್ಶಿ) ಆಗಿದ್ದಾರೆ. ಈ ಹುದ್ದೆಯು ಆರ್‍ಎಸ್‍ಎಸ್‍ನ ಸರಸಂಘ ಚಾಲಕ(ಮುಖ್ಯಸ್ಥ) ಮೋಹನ್ ಭಾಗವತ್ ಅವರ ನಂತರದ ಹುದ್ದೆಯ ಮಾನ್ಯತೆ ಹೊಂದಿದೆ. 2015ರಲ್ಲಿ ಇವರು ಬಯ್ಯಾಜಿ ಅವರು ಈ ಹುದ್ದೆಗೆ ಆಯ್ಕೆಯಾಗಿದ್ದರು. ಭಾರತದಾದ್ಯಂತ 1,400 ಪ್ರತಿನಿಧಿಗಳು ಇವರನ್ನು ಆಯ್ಕೆ ಮಾಡಿದ್ದರು.
ಮೂರು ವರ್ಷಕ್ಕೊಮ್ಮೆ ಆರ್‍ಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಯಲ್ಲಿ ಮುಂದುವರೆಯಲು ಬಯ್ಯಾಜಿ ಜೋಷಿ ಆಸಕ್ತಿ ತೋರದೆ ಇರುವ ಕಾರಣ ಪ್ರಭಾವಿ ನಾಯಕ ದತ್ತಾತ್ರೇಯ ಹೊಸಬಾಳೆ ಆ ಹುದ್ದೆಯನ್ನು ಅಲಂಕರಿಸಲಿದ್ದಾರೆ. ನಾಳೆ ಈ ಬಗ್ಗೆ ಅಂತಿಮ ಘೋಷಣೆ ಹೊರಬೀಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ