ಮೈಸೂರು,ಮಾ.10-ಸಾಂಸಾರಿಕ ಕಲಹದಿಂದ ಮನನೊಂದು ಪತ್ನಿ ನೇಣಿಗೆ ಶರಣಾಗಿರುವ ಘಟನೆ ಸರಸ್ವತಿ ಪುರಂ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೋಗಾದಿ ವಾಸಿ ಎಲೆಕ್ಟ್ರಿಷಿಯನ್ ಮಹೇಶ್ ಎಂಬುವರ ಪತ್ನಿ ಅಕ್ಷತ(23) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಕೆಲ ದಿನಗಳಿಂದ ಗಂಡ-ಹೆಂಡಿರ ನಡುವೆ ಜಗಳ ನಡೆಯತ್ತಿದ್ದು, ಮನನೊಂದು ಪತ್ನಿ ಅಕ್ಷತಾ ರಾತ್ರಿ ಸ್ನಾನದ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನು ಕಂಡ ಪತಿ ಮತ್ತು ಅತ್ತೆ ಶವವನ್ನು ಕೆಳಗಿಳಿಸಿ ಮೂರು ವರ್ಷದ ಮಗುವಿನೊಂದಿಗೆ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೆÇಲೀಸರು ಪರಿಶೀಲಿಸಿದಾಗ ಮನೆಯಲ್ಲಿ ಆಕೆ ಚೂಡಿದಾರ್ ವೇಲ್ನಲ್ಲಿ ನೇತಾಡುತ್ತಿದದ್ದು ಕಂಡುಬಂದಿದೆ.
ಈ ಬಗ್ಗೆ ಸರಸ್ವತಿಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.