ಬೆಂಗಳೂರು,ಮಾ.10- ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮೆಟ್ರೋ ಮಾರ್ಗದಲ್ಲಿ ಆರು ಬೋಗಿಯ ಮೊದಲ ರೈಲನ್ನು ಏ.15ರಂದು ಪ್ರಯಾಣಿಕರ ಸೇವೆಗೆ ಒದಗಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ.
ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ನಿಂದ ಫೆ.14ರಂದು ಪಡೆದಿದ್ದ ಮೂರು ಬೋಗಿಗಳನ್ನು ಬೈಯಪ್ಪನಹಳ್ಳಿ ಮೆಟ್ರೋ ಡಿಪೆÇೀದಲ್ಲಿ ಇರಿಸಿ, ಮೂರು ಬೋಗಿಯ ರೈಲಿಗೆ ಅಳವಡಿಸಲಾಗಿತ್ತು. ಬಳಿಕ ರೈಲಿನ ಮುಂಭಾಗದಲ್ಲಿ ಲೋಕೊ ಪೈಲೆಟ್ ಕೂರುವ ಕ್ಯಾಬಿನ್ ನ ಉಪಕರಣಗಳಲ್ಲಿ ಸುಮಾರು 80 ತಂತ್ರಾಂಶಗಳನ್ನು ಇನ್ ಸ್ಟಾಲ್ ಮಾಡಲಾಗಿತ್ತು.
ಇದಾದ ಬಳಿಕ ರೈಲಿನ ಆಸನಗಳು ಹಾಗೂ ಎಸಿ ಸೇರಿದಂತೆ ಹಲವು ಸಾಧನಗಳ ಪರಿಶೀಲನೆ ನಡೆದಿದೆ. ನಂತರ ಡಿಪೆÇದಲ್ಲಿರುವ ಹಳಿಯಲ್ಲಿ ಪರೀP್ಷÁರ್ಥ ಸಂಚಾರ ನಡೆಸಲಾಗಿದೆ. ನಂತರ ಸಿಗ್ನಲಿಂಗ್ , ವಿದ್ಯುತ್ ಸಂಪರ್ಕದ ಕಾರ್ಯಗಳು ಪೂರ್ಣಗೊಂಡಿದ್ದು, ರಾತ್ರಿಯ ವೇಳೆ ನೇರಳೆ ಮಾರ್ಗದಲ್ಲಿ ಪರೀP್ಷÁರ್ಥ ಸಂಚಾರ ನಡೆಸಲು ಸಿದ್ಧತೆ ಮಾಡಿಕೊಡಲಾಗಿದೆ.
ಏಪ್ರಿಲ್ ಆರಂಭದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆಯುವ ನಿರೀಕ್ಷೆ ಇದ್ದು, ಬಳಿಕ ವಾಣಿಜ್ಯ ಸಂಚಾರಕ್ಕೆ ಅನುಮತಿ ದೊರೆಯಲಿದೆ.
ಬಿಎಂಆರ್ ಸಿಎಲ್ ಗೆ 1,400 ಕೋಟಿ ರೂ. ವೆಚ್ಚದಲ್ಲಿ 150 ಮೆಟ್ರೋ ಬೋಗಿ ಪೂರೈಸುವ ಗುತ್ತಿಗೆಯನ್ನು ಬಿಇಎಂಎಲ್ ಪಡೆದುಕೊಂಡಿದೆ. ಮೊದಲ ಹಂತದಲ್ಲಿ ಫೆ.14ರಂದು ಬಿಎಂಆರ್ ಸಿಎಲ್ ಗೆ 3 ಇಂಟರ್ ಮೀಡಿಯೆಟ್ ಮೆಟ್ರೋ ಬೋಗಿಗಳನ್ನು ಬಿಇಎಂಎಲ್ ಹಸ್ತಾಂತರಿಸಿತ್ತು.
ಬೈಯಪ್ಪನಹಳ್ಳಿ ಡಿಪೆÇೀದಲ್ಲಿ 3ಬೋಗಿಯ ರೈಲಿಗೆ ಹೊಸ 3 ಇಂಟರ್ ಮೀಡಿಯೇಟ್ ಬೋಗಿ ಜೋಡಿಸಿ ಅಲ್ಲಿನ ಹಳಿಯಲ್ಲೇ ಪರೀP್ಷÁರ್ಥ ಸಂಚಾರ ನಡೆಸಲಾಗಿದ್ದು, ಶೀಘ್ರ ಮುಖ್ಯ ಹಳಿಯಲ್ಲೇ ರಾತ್ರಿ ವೇಳೆ 6 ಬೋಗಿಗಳ ಸಂಚಾರ ನಡೆಯಲಿದೆ.
ಅಂದಾಜು 1 ತಿಂಗಳು ನಡೆಯುವ ಈ ಪರೀಕ್ಷೆಯಲ್ಲಿ , ರೈಲಿನ ಬ್ರೇಕ್ ವ್ಯವಸ್ಥೆ, ಸಿಸಿ ಕ್ಯಾಮರಾ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ರೈಲಿಗೆ ವಿದ್ಯುತ್ ಸರಬರಾಜು ಮಾಡುವ ಉಪಕರಣ ತಪಾಸಣೆ,ಸಿಗ್ನಲಿಂಗ್ ಮಾಡುವ ಉಪಕರಣ ತಪಾಸಣೆ, ಸಿಗ್ನಲಿಂಗ್ ಡೈನಾಮಿಕ್ ಪರೀಕ್ಷೆಗೊಳಪಡಲಿದೆ.