50 ಸಿಕ್ಸರ್‍ಗಳ ಸರದಾರ ಸುರೇಶ್‍ರೈನಾ

ಕೊಲಂಬೊ,ಮಾ.9- ಸುದೀರ್ಘ ಕಾಲದ ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾದ ಮಧ್ಯ ಕ್ರಮಾಂಕದ ಆಟಗಾರ ಸುರೇಶ್‍ರೈನಾ ಈಗ 50 ಸಿಕ್ಸರ್‍ಗಳ ಸರದಾರರಾಗಿದ್ದಾರೆ.
ಸುಮಾರು ಒಂದೂವರೆ ವರ್ಷಗಳ ಕಾಲ ಕ್ರಿಕೆಟ್ ಅಂಗಳದಿಂದ ದೂರವಿದ್ದ ರೈನಾ, ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಯ ಮೂಲP ಮತ್ತೆ ಟೀಂ ಇಂಡಿಯಾವನ್ನು ಕೂಡಿಕೊಂಡು ಬ್ಯಾಟಿಂಗ್ ಅಬ್ಬರ ಆರಂಭಿಸಿದ್ದಾರೆ.
ನಿನ್ನೆ ಇಲ್ಲಿ ನಡೆದ ನಿದಾಸ್ ಟ್ರೋಫಿಯ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ಸಿಕ್ಸರ್ ಬಾರಿಸುವ ಮೂಲಕ 50 ಸಿಕ್ಸರ್ ಬಾರಿಸಿ ಟೀಂ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೂರನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಸಿಕ್ಸರ್‍ಗಳ ಸರದಾರ ಎಂದೇ ಗುರುತಿಸಿಕೊಂಡಿರುವ ಯುವರಾಜ್‍ಸಿಂಗ್ (74 ಸಿಕ್ಸ್), ರೋಹಿತ್ ಶರ್ಮಾ (69 ಸಿಕ್ಸ್) ಅಗ್ರ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಹೊಂದಿದ್ದ ಮಹೇಂದ್ರ ಸಿಂಗ್ ಧೋನಿ (46 ಸಿಕ್ಸ್), ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (41 ಸಿಕ್ಸ್) ಕ್ರಮವಾಗಿ 4 ಮತ್ತು 5ನೆ ಸ್ಥಾನದಲ್ಲಿದ್ದಾರೆ.
ಚುಟುಕು ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಿಕ್ಸರ್‍ಗಳನ್ನು ಸಿಡಿಸಿರುವ ಖ್ಯಾತಿಗೆ ಜಮೈಕಾದ ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್‍ಗೇಲ್ ಹಾಗೂ ನ್ಯೂಜಿಲೆಂಡ್‍ನ ಮಾರ್ಟಿನ್ ಗುಪ್ಟಿಲ್ ಕ್ರಮವಾಗಿ ವ 103 ಸಿಕ್ಸರ್‍ಗಳನ್ನು ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ