ಬಿಜೆಪಿಯಿಂದ ನ್ಯೂ ಬೆಂಗಳೂರು ಫಾರ್ ನ್ಯೂ ಇಂಡಿಯ ಅಭಿಯಾನ

ಬೆಂಗಳೂರು,ಮಾ.9-ನಗರದ ಯುವ ಮತದಾರರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ನ್ಯೂ ಬೆಂಗಳೂರು ಫಾರ್ ನ್ಯೂ ಇಂಡಿಯ( ನವ ಬೆಂಗಳೂರಿನಿಂದ ನವಭಾರತ) ಎಂಬ ನಾಗರಿಕ ಕೇಂದ್ರಿತ ಅಭಿಯಾನವನ್ನು ಆರಂಭಿಸಿದೆ.
ಈ ಅಭಿಯಾನವು ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ನಡೆಯಲಿದ್ದು , ಪ್ರಮುಖವಾಗಿ ನಗರದ ಜನತೆಯನ್ನು ಕಾಡುತ್ತಿರುವ ಪ್ರಚಲಿತ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.
ಅಭಿಯಾನದ ಮೊದಲ ಹಂತದಲ್ಲಿ ಸಂಚಾರಿ ಸಮಸ್ಯೆ, ನರಕದ ಬಾಳು-ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ, ಗುಡ್ಡೆ ಬಿದ್ದ ಕಸ, ಹಸಿರು ಸರ್ವನಾಶ ಗಾರ್ಬೇಜ್ ಸಿಟಿಯಿಂದ ಗಾರ್ಡನ್ ಸಿಟಿ ಗರಿಮೆ ಮಾಡುವುದು ಅಭಿಯಾನದ ಮುಖ್ಯ ಉದ್ದೇಶಗಳಲ್ಲೊಂದು.
ಬೆಂಕಿ ಬಿದ್ದ ವಿಷದ ಕೆರೆ, ಊರ ತುಂಬ ಕೊಳಕು, ನೊರೆ ಆವಾಸನ, ಕೆರೆಗಳ ಪುನರುಜ್ಜೀವನ, ಭಯಮುಕ್ತಗೊಳಿಸಿ ಸುರಕ್ಷಿತ ನಗರವನ್ನಾಗಿಸುವುದು, ಭ್ರಷ್ಟಾಚಾರಕ್ಕೆ ಕಡಿವಾಣ, ಬಡತನ ನಿರ್ಮೂಲನೆ, ಕುಡಿಯುವ ಶುದ್ದು ನೀರಿನ ಪೂರೈಕೆ, ಕೊಲೆ, ಸುಲಿಗೆ ಅತ್ಯಾಚಾರದಿಂದ ಮುಕ್ತಗೊಳಿಸಿ ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರು ಸ್ಥಾಪನೆ ಮಾಡುವ ಹೆಜ್ಜೆಯೊಂದಿಗೆ ಬಿಜೆಪಿ ಈ ಅಭಿಯಾನ ಆರಂಭಿಸಿದೆ.
ವಿದ್ಯಾರ್ಥಿಗಳ ಜೊತೆ ಸಂವಾದ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸೇರಿದಂತೆ ಹಲವು ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಪ್ರತಿಯೊಂದು ಪರಿಕಲ್ಪನೆಗೆ ವಿದ್ಯಾರ್ಥಿಗಳು ಮಂಡಿಸಿದ ವರದಿಗೆ ಬಹುಮಾನ ಕೂಡ ದೊರೆಯಲಿದೆ.
ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಇಲ್ಲವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದಾರೆ.
ವಿಜೇತರು, ಪ್ರಧಾನಿ ಇಲ್ಲವೆ ಅಧ್ಯಕ್ಷರ ಜೊತೆ ಸಂವಾದ ನಡೆಸುವ ಅವಕಾಶವೂ ಲಭಿಸಲಿದೆ. ಈ ಅಭಿಯಾನದ ಜೊತೆ ಏಳು ಕಾಲೇಜುಗಳಲ್ಲಿ ವಿವಿಧ ಸ್ಪರ್ಧಾ ಕೂಟಗಳು ನಡೆಯಲಿವೆ.
ಕೆ.ಆರ್.ಪುರಂ,ಮಲ್ಲೇಶ್ವರ, ಬಸವನಗುಡಿ, ಮಾರತ್ತಹಳ್ಳಿ , ನಾಗರಬಾವಿ, ಯಲಹಂಕ ಹಾಗೂ ಜಯನಗರದ ಆಯ್ದ ಕಾಲೇಜುಗಳಲ್ಲಿ ಮಾ.20-23ರೊಳಗೆ ಒಂದು ದಿನದ ಉತ್ಸವ ನಡೆಯಲಿದೆ. ಪ್ರಬಂಧ ಚರ್ಚೆ, ಮ್ಯಾಡ್ ಆಡ್ಸ್ , ಪೆÇೀಸ್ಟರ್ ಮೇಕಿಂಗ್ ಸ್ಪರ್ಧೆ ಸೇರಿದಂತೆ ನಗರದ ಸಮಸ್ಯೆಗೆ ಉತ್ತಮ ಪರಿಹಾರ ಸೂಚಿಸುವ ವಿದ್ಯಾರ್ಥಿ ತಂಡಕ್ಕೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ದೊರೆಯಲಿದೆ.
ಛಾಯಾಗ್ರಹಣ ಸ್ಪರ್ಧೆ, ಯುವಜನ ಸಮಾವೇಶ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಜೊತೆ ಫೇಸ್‍ಬುಕ್ ಲೈವ್ ಚಾಟ್ಸ್‍ನಂತಹ ಆನ್‍ಲೈನ್ ಕಾರ್ಯಕ್ರಮಗಳು ನಡೆಯಲಿವೆ.
ನವ ಬೆಂಗಳೂರಿನಿಂದ ನವಭಾರತ ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಿಡಿಡಿ.್ಞಛಿಡಿಚಿಛ್ಞಿಜZ್ಝ್ಠ್ಟ್ಠ.ಜ್ಞಿ ವೆಬ್‍ಸೈಟ್‍ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ