ಕೇರಳ ಲವ್‌ ಜಿಹಾದ್‌ ಪ್ರಕರಣ: ಶಫೀನ್‌ ಜಹಾನ್‌ ಜತೆಗಿನ ಹದಿಯಾಳ ಮದುವೆಯನ್ನು ಪುನರೂರ್ಜಿತಗೊಳಿಸಿದ ಸುಪ್ರೀಂ

ನವದೆಹಲಿ :ಮಾ-8: ಕೇರಳ ಲವ್‌ ಜಿಹಾದ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ , ಕೇರಳ ಹೈಕೋರ್ಟಿನ ಆದೇಶವನ್ನು ವಜಾ ಗೊಳಿಸಿ ಪತಿ ಶಫೀನ್‌ ಜಹಾನ್‌ ಜತೆಗಿನ ಹದಿಯಾ ಳ ಮದುವೆಯನ್ನು ಪುನರೂರ್ಜಿತಗೊಳಿಸಿದೆ.

ಶಫೀನ್ ಜಹಾನ್ ಜೊತೆಗಿನ ವಿವಾಹವನ್ನು ರದ್ದುಗೊಳಿಸಿ ತನ್ನನ್ನು ಪೋಷಕರ ವಶಕ್ಕೆ ನೀಡಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಈ ಹಿಂದೆ ಹಾದಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಳು.

ಇದರಂತೆ ಇಂದು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತು ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್, ಡಿವೈ. ಚಂದ್ರಚೂಡ್ ಅವರಿದ್ದ ಪೀಠ, ಹಾದಿಯಾ ವಿವಾಹವನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದು, ಶಫೀನ್‌ ಜಹಾನ್‌ ಜತೆಗಿನ ಹದಿಯಾಳ ವಿವಾಹವನ್ನು ಪುನರೂರ್ಜಿತಗೊಳಿಸಿದೆ.

ಇದಕ್ಕೆ ಮೊದಲು ಇಂದು ಬೆಳಗ್ಗೆ ಸರ್ವೋಚ್ಚ ನ್ಯಾಯಾಲಯ ತನಿಖಾ ಸಂಸ್ಥೆಗೆ ಈ ಪ್ರಕರಣದಲ್ಲಿ ಯಾವುದೇ ರೀತಿಯ ಪಾತಕತನ ಇದೆಯೇ ಎಂಬುದನ್ನು ಪತ್ತೆ ಹಚ್ಚುವ ತಮ್ಮ ತನಿಖೆಯನ್ನು ಮುಂದುವರಿಸುವಂತೆ ಸೂಚಿಸಿತು; ಆದರೆ ಹದಿಯಾಳ ಮದವೆ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಎಚ್ಚರಿಕೆ ನೀಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ