ಸ್ವಇಚ್ಚೆಯಿಂದ ಮದುವೆಯಾಗಿರುವುದಾಗಿ ಲಕ್ಷ್ಮೀ ನಾಯ್ಕ್ ಮತ್ತು ನಿರ್ಮಾಪಕ ಸುಂದರ್‍ಗೌಡ ದಂಪತಿ ಹೇಳಿಕೆ

 

ಬೆಂಗಳೂರು,ಮಾ.9-ತಾವು ಸ್ವಇಚ್ಚೆಯಿಂದ ಮದುವೆಯಾಗಿರುವುದಾಗಿ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಮತ್ತು ನಿರ್ಮಾಪಕ ಸುಂದರ್‍ಗೌಡ ದಂಪತಿ ಯಲಹಂಕ ನ್ಯೂಟೌನ್ ಪೆÇಲೀಸ್ ಠಾಣೆಗೆ ತೆರಳಿ ಪೆÇಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ನವದಂಪತಿ ಯಲಹಂಕ ನ್ಯೂಟೌನ್ ಪೆÇಲೀಸ್ ಠಾಣೆ ಆಗಮಿಸಿ ಇನ್‍ಸ್ಪೆಕ್ಟರ್ ಮಂಜುನಾಥ್ ಮುಂದೆ ಈ ಹೇಳಿಕೆ ನೀಡಿದ್ದಾರೆ.
ಲಕ್ಷ್ಮೀ ನಾಯ್ಕ್ ಅವರು ತನ್ನ ಸ್ವಇಚ್ಛೆಯಿಂದ ಸುಂದರಗೌಡ ಅವರನ್ನು ಮದುವೆಯಾಗಿದ್ದೇನೆ. ಯಾವುದೇ ಬಲವಂತವಿಲ್ಲ ಎಂದು ಹೇಳಿಕೆ ನೀಡಿದರೆ, ಸುಂದರ್ ಗೌಡ ಸಹ ನಾನು ಒತ್ತಾಯಪಡಿಸಿಲ್ಲ. ನಮ್ಮಿಬ್ಬರ ಸ್ವಇಚ್ಛೆಯಂತೆ ಮದುವೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪತ್ನಿ ಗೀತಾ ನಾಯ್ಕ್ ಅವರು ಮೊನ್ನೆ ಯಲಹಂಕ ನ್ಯೂಟೌನ್ ಠಾಣೆಗೆ ಆಗಮಿಸಿ ಮಗಳು ಲಕ್ಷ್ಮೀ ನಾಯ್ಕ್ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.
ಮೈಸೂರಿನ ರೆಸಾರ್ಟ್‍ವೊಂದರಲ್ಲಿ ಲಕ್ಷ್ಮಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೆÇಲೀಸರು ಅಲ್ಲಿಗೂ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ ಇವರು ಪತ್ತೆಯಾಗಿರಲಿಲ್ಲ. ನಿನ್ನೆ ಇವರಿಬ್ಬರು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆಂಬ ಸುದ್ದಿ ಕೇಳಿಬಂದಿತ್ತು.
ಸುದ್ದಿ ಹರಡುತ್ತಿದಂತೆ ನವದಂಪತಿ ತಾವು ಸ್ವಇಚ್ಛೆಯಿಂದ ಮದುವೆ ಮಾಡಿಕೊಂಡಿರುವುದಾಗಿ ಫೇಸ್‍ಬುಕ್‍ನಲ್ಲಿ ಸೆಲ್ಫಿವೊಂದನ್ನು ಪೆÇೀಸ್ಟ್ ಮಾಡಿದ್ದರು.
ಯಲಹಂಕ ನ್ಯೂಟೌನ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದರಿಂದ ಇಂದು ಬೆಳಗ್ಗೆ ನವದಂಪತಿ ಠಾಣೆಗೆ ಹಾಜರಾಗಿ ಇನ್‍ಸ್ಪೆಕ್ಟರ್ ಮುಂದೆ ತಾವು ಸ್ವಇಚ್ಛೆಯಿಂದ ಮದುವೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿ ತೆರಳಿದರು.
ಲಕ್ಷ್ಮಿ ಅಜ್ಜಿ ಅಸ್ವಸ್ಥ:
ಯಲಹಂಕ ನ್ಯೂಟೌನ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದರಿಂದ ಶಾಸಕರ ಮಗಳು ಲಕ್ಷ್ಮಿ ಠಾಣೆಗೆ ಆಗಮಿಸಿ ಪೆÇಲೀಸರ ಮುಂದೆ ಹೇಳಿಕೆ ನೀಡಲಿದ್ದಾರೆಂಬ ವಿಷಯ ತಿಳಿದು ಮೊಮ್ಮಗಳ ಮನವೊಲಿಸುವ ಸಲುವಾಗಿ ಲಕ್ಷ್ಮಿ ಬಾಯಿ ಸಂಬಂಧಿಕರೊಂದಿಗೆ ಆಗಮಿಸಿದ್ದರು.
ಈ ವೇಳೆ ಮೊಮ್ಮಗಳ ಮನವೊಲಿಕೆಗೆ ಪ್ರಯತ್ನಿಸಿದರಾದರೂ ಲಕ್ಷ್ಮೀ ಸ್ವಇಚ್ಛೆಯಿಂದ ಮದುವೆಯಾಗಿದ್ದು, ಸುಂದರ್‍ಗೌಡ ಅವರೊಂದಿಗೇ ಬಾಳುತ್ತೇನೆ ಎಂದು ಹೇಳಿದ್ದರಿಂದ ನೊಂದಿದ್ದ ಅಜ್ಜಿ ಅಸ್ವಸ್ಥಗೊಂಡರು. ಕೂಡಲೇ ಇವರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ