ಗುರಿ ತಲುಪಲು ಉತ್ತಮ ಮಾರ್ಗಆಯ್ಕೆ ಮಾಡಿಕೊಳ್ಳಬೇಕು : ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ
ಬೆಂಗಳೂರು,ಮಾ.8- ಗುರಿ ತಲುಪಲು ಹಲವಾರು ಮಾರ್ಗಗಳಿವೆ. ಅದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಹೇಳಿದರು.
ಭಾರತೀಯ ವಿದ್ಯಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ನಂಬಿಕೆ ಮತ್ತು ಅದರಾಚೆಗೆ ಕುರಿತ ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನಂಬಿಕೆ, ಅಪನಂಬಿಕೆ, ಮೂಢನಂಬಿಕೆಗಳಿವೆ. ಅದರಲ್ಲಿ ನಂಬಿಕೆಯನ್ನು ಕ್ರೂಢೀಕರಿಸಿಕೊಂಡು ಅದನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಧರ್ಮವು ಸಮಾಜದ ಒಗ್ಗಟ್ಟಿಗೆ ನೆರವಾಗುತ್ತದೆ. ಧಾರ್ಮಿಕ ನಂಬಿಕೆಗಳು ಆರೋಗ್ಯಕರ ಸ್ನೇಹ-ಸೌಹಾರ್ದತೆಗಳನ್ನು ಸಮಾಜದಲ್ಲಿ ಜೀವಂತವಾಗಿರಿಸುತ್ತವೆ .ಜಗತ್ತಿನಲ್ಲಿ ನಂಬಿಕೆಯು ವಿಸ್ತಾರವಾಗಿ ಹರಡಿಕೊಂಡಿದೆ ಎಂದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯ ಭಾರತ ಸೇರಿದಂತೆ ವಿವಿಧ ದೇಶಗಳ ಧರ್ಮಗಳ ತತ್ವಗಳ ಕುರಿತು ಚರ್ಚೆ ನಡೆಸಿದರು. ಜನರಲ್ಲಿ ತಮ್ಮ ಬಗ್ಗೆ ನಂಬಿಕೆ ಇರಬೇಕು. ಆಗ ಮಾತ್ರ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದರು.