ನವದೆಹಲಿ, ಮಾ.8-ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ ವನಿತೆಯರನ್ನು ಸ್ಮರಿಸಿದ್ದಾರೆ.
ಮನುಕುಲದ ಇತಿಹಾಸದಲ್ಲಿ ಹಲವಾರು ಮಹಿಳೆಯರು ತಮ್ಮ ಆದರ್ಶ ಕೊಡುಗೆಗಳಿಂದ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ತಮ್ಮ ಮಹತ್ವದ ಸ್ವಚ್ಛ ಭಾರತ ಅಭಿಯಾನದ ಪ್ರೇರಣೆಯಾದ ದಿವಂಗತ ಕುನ್ವರ್ ಬಾಯಿ ಅವರಿಗೆ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಛತ್ತೀಸ್‍ಗಢದ ಕೊಟಾಭರ್ರಿ ಗ್ರಾಮದ ಶತಾಯುಷಿಯಾಗಿದ್ದ ಅವರು ತಮ್ಮ ಏಕೈಕ ಆದಾಯದ ಮೂಲವಾಗಿದ್ದ ಮೇಕೆಗಳನ್ನು ಮಾರಿ ತಮ್ಮ ಗ್ರಾಮದಲ್ಲಿ 22,000 ರೂ.ಗಳನ್ನು ಖರ್ಚು ಮಾಡಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದರು. ಅವರು ಸ್ವಚ್ಚ ಭಾರತ ಅಭಿಯಾನಕ್ಕೆ ಸ್ಫೂರ್ತಿ. ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಗುಣಗಾನ ಮಾಡಿದ್ದಾರೆ.