ಮೈಸೂರು, ಮಾ.8- ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಶಾಸಕರ ಪುತ್ರಿ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ಗೌಡ ಅವರೊಂದಿಗೆ ಚಾಮುಂಡಿಬೆಟ್ಟದಲ್ಲಿ ವಿವಾಹ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುಂದರ್ಗೌಡ ಅವರ ಕುಟುಂಬದ ಹನ್ನೆರಡಕ್ಕೂ ಹೆಚ್ಚು ಮಂದಿ ನಗರದ ಹುಣಸೂರು ರಸ್ತೆಯಲ್ಲಿರುವ ದಿ ರೂಸ್ಟ್ ರೆಸಾರ್ಟ್ನಲ್ಲಿ ನಿನ್ನೆ ವಾಸ್ತವ್ಯ ಹೂಡಿದ್ದರು. ಇಂದೂ ಕೂಡ ಅಲ್ಲೇ ಅವರುಗಳೆಲ್ಲ ತಂಗಿದ್ದಾರೆ.
ಶಾಸಕ ಶಿವಮೂರ್ತಿ ನಾಯ್ಕ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ಪೆÇಲೀಸರು ಮಫ್ತಿಯಲ್ಲಿ ಮೈಸೂರಿಗೆ ಆಗಮಿಸಿ ಇಂದು ದಿ ರೂಸ್ಟ್ ರೆಸಾರ್ಟ್ನಲ್ಲಿ ತಪಾಸಣೆ ನಡೆಸಿದರು.
ಶಾಸಕರ ಪುತ್ರಿ ಹಾಗೂ ಸುಂದರ್ಗೌಡ ರೆಸಾರ್ಟ್ನಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಪೆÇಲೀಸರು ಅಲ್ಲಿದ್ದ ಸುಂದರ್ಗೌಡರ ಕುಟುಂಬ ಸದಸ್ಯರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಸುರೇಶ್ಗೌಡ ಹಾಗೂ ಶಾಸಕರ ಪುತ್ರಿ ವಿವಾಹ ಮಾಡಿಕೊಂಡ ನಂತರ ಗೌಪ್ಯಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.