ಲೋಕಾಯುಕ್ತರ ಮೇಲೆ ಹಲ್ಲೆ ಹಿನ್ನಲೆ: ವಿಧಾನಸೌಧ ಮತ್ತು ವಿಕಾಸಸೌಧದ ದ್ವಾರಗಳಲ್ಲಿ ತೀವ್ರಗೊಂಧ ತಪಾಸಣೆ
ಬೆಂಗಳೂರು, ಮಾ.8- ನಿನ್ನೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಬೆನ್ನಲ್ಲೆ ಆಡಳಿತದ ಶಕ್ತಿಕೇಂದ್ರಗಳಾಗಿರುವ ವಿಧಾನಸೌಧ ಮತ್ತು ವಿಕಾಸಸೌಧದ ದ್ವಾರಗಳಲ್ಲಿ ಸಾರ್ವಜನಿಕ ತಪಾಸಣೆ ತೀವ್ರಗೊಳಿಸಲಾಗಿದೆ.
ನಿನ್ನೆ ಮಧ್ಯಾಹ್ನದಿಂದಲೇ ವಿಧಾನಸೌಧ, ವಿಕಾಸಸೌಧ ಪ್ರವೇಶಿಸುವ ದ್ವಾರಗಳಲ್ಲಿ ಪೆÇಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಪ್ರತಿಯೊಬ್ಬರನ್ನು ಗುರುತಿನ ಚೀಟಿ ಅಥವಾ ಪಾಸ್‍ಗಳನ್ನು ತೋರಿಸಿದ ನಂತರವೇ ಒಳಬಿಡುತ್ತಿದ್ದಾರೆ. ವಾಹನಗಳ ಮೇಲೂ ಹೆಚ್ಚಿನ ನಿಗಾ ವಹಿಸಿ ತಪಾಸಣೆ ನಡೆಸಲಾಗುತ್ತಿದೆ.