ಬೀದರ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ವೀರಶೆಟ್ಟಿ ಖ್ಯಾಮಾ ಮಮದಾಪೂರೆ…

ಬೀದರ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ವೀರಶೆಟ್ಟಿ ಖ್ಯಾಮಾ ಮಮದಾಪೂರೆ…
ಬೀದರ ಮಾ.08: ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಮೊಸಳೆ ಕಣ್ಣಿರು ಸುರಿಸುವುದಾಗಿದೆ. ಕಳೆದ ಚುನಾವಣೆಯಲ್ಲಿ ಕಾಣೆಯಾಗಿದ ನಾಯಕರುಗಳು ಈಗ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದುಗಳ ಪಾಲಿಗೆ ಅವರು ನಾಟ್ ರಿಚಬಲ್ ಆಗಿದ್ದಾರೆ. ಬಿಜೆಪಿಯ ಪರಿವರ್ತನೆ ಯಾತ್ರೆಯಲ್ಲ , ಅದು ಪಾಪದ ಯಾತ್ರೆ ಈ ನಿಟ್ಟಿನಲ್ಲಿ ಹಿಂದುತ್ವ ರಕ್ಷಣೆಗೆ ಮತ್ತು ಅಭಿವೃದ್ಧಿಗಾಗಿ ಮಹತ್ತರ ಉದ್ದೇಶದಿಂದ ಶಿವ ಸೇನೆ ಕಾರ್ಯ ಮಾಡಲಿದೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ನೂತನ ಅಧ್ಯಕ್ಷರುಗಳ ನೇಮಕ ಮತ್ತು ಘೋಷಣೆ ಮಾಡಿ ನಂತರ ಅರ್ಹ ಅಭ್ಯರ್ಥಿಗಳ ಪಟ್ಟಿ ಮಾಡಲಾಗುವುದು. ರಾಜ್ಯದ 224 ಸ್ಥಾನಗಳಲ್ಲಿ ಸುಮಾರು 100 ಸ್ಥಾನಗಳು ಗೆಲ್ಲುವ ಭರವಸೆಗಳು ನಮಗಿದೆ. ಅವುಗಳಲ್ಲಿ 10 ಸ್ಥಾನಗಳು ಸಂತರಿಗೆ ನೀಡಲಾಗುವುದು ಎಂದು ಶಿವ ಸೇನೆಯ ರಾಜ್ಯ ನೇತೃತ್ವ ವಹಿಸಿಕೊಂಡಿರುವ ಮತ್ತು ಶ್ರೀ ರಾಮ ಸೇನೆಯ ಮುಖಂಡರಾದ ಶ್ರೀ ಸಿದ್ದಲಿಂಗ ಸ್ವಾಮಿ ಆಂದೋಲ ಅವರು ಇಂದು
ಬೀದರ್ ನಗರದ ಕೃಷ್ಣಾ ರೇಜೆನ್ಸಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬೀದರ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ವೀರಶೆಟ್ಟಿ ಖ್ಯಾಮಾ ಮಮದಾಪೂರ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿ ಧ್ವಜಾ ಮತ್ತು ನೇಮಕಾತಿಯ ಪತ್ರ ನೀಡುವ ಮೂಲಕ ಅಧಿಕಾರ ನೀಡಿದರು. ಎಂ.ಐ.ಎಂ.ಪಕ್ಷ ರಾಜ್ಯದಲ್ಲಿಯು ಚುನಾವಣೆಯಲ್ಲಿ ಸ್ಪರ್ಧೆ ಒಡ್ಡುತ್ತಿದೆ ಅದಕ್ಕೆ ಸೆಡ್ಡು ಹೊಡೆದು ಶಿವಸೇನೆ ಹಿಂದುತ್ವದ ನೆಲೆ ಗಟ್ಟಿನಲ್ಲಿ ಸ್ಪರ್ಧೆಗಿಳಿಯಲಿದೆ ವಂದೇ ಮಾತರಂಗೆ ಗೌರವ ಕೊಡದ ಮತ್ತು ಬೊಲೋ ಭಾರತ್ ಮಾತಾಕೀ ಜೈಯನ್ನದ ಎಂ.ಐ.ಎಂ. ಪಕ್ಷದ ಧೋರಣೆ ಖಂಡನೀಯವಾಗಿದೆ ಮತ್ತು ವಿಷಾದನೀಯವಾಗಿದೆ ಅದಕ್ಕೆ ಮಟ್ಟ ಹಾಕುವ ಶಕ್ತಿ ಶಿವ ಸೇನೆ ಪಕ್ಷಕ್ಕಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಮತ್ತು ಶಿವ ಸೇನೆಯ ಕರ್ನಾಟಕದ ನೇತೃತ್ವ ವಹಿಸಿಕೊಂಡಿರುವ ಶ್ರೀ ಸಿದ್ದಲಿಂಗ ಸ್ವಾಮಿ ಆಂದೋಲ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿರಶೆಟ್ಟಿ ಖ್ಯಾಮಾ ಮಮದಾಪೂರ, ಚನ್ನವೀರಸ್ವಾಮಿ ಯಾದಗಿರ, ಹೈದ್ರಾಬಾದ ಕರ್ನಾಟಕದ ಅಧ್ಯಕ್ಷರಾದ ರಾಜುಭವಾನಿ ಅವರುಗಳು ಉಪಸ್ಥಿತರಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ