ಪ್ರತ್ಯೇಕ ತ್ರಿವರ್ಣ ನಾಡಧ್ವಜ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:ಮಾ-8: ಕರ್ನಾಟಕಕ್ಕೆ ಪ್ರತ್ಯೇಕ ತ್ರಿವರ್ಣ ನಾಡಧ್ವಜ ಕನಸು ನನಸಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ,ತಜ್ಞರ ಸಮಿತಿ ನೀಡಿದ್ದ ಹಳದಿ ಬಿಳಿ ಹಾಗೂ ಕೆಂಪು ಬಣ್ಣವನ್ನು ಒಳಗೊಂಡ ರಾಜ್ಯ ಲಾಂಛನ ಗಂಡಭೇರುಂಡ ಇರುವ ಅಧಿಕೃತ ನಾಡಧ್ವಜವನ್ನು ಅನಾವರಣಗೊಳಿಸಿದರು.

ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ, ಕನ್ನಡ ಪರ ಹೋರಾಟಗಾರು, ರಾಜ್ಯ ಸಚಿವರು ಸೇರಿದಂತೆ ಪ್ರಮುಖ ಸಾಹಿತಿಗಳ ಸಮ್ಮುಖದಲ್ಲಿ ನೂತನ ನಾಡಧ್ವಜವನ್ನು ಅನಾವರಣಗೊಳಿಸಿದರು. ಸಾಹಿತಿ ಹಂಪನಾಗರಾಜಯ್ಯ ಅವರು ತ್ರಿವರ್ಣ ಬಣ್ಣದ ನಾಡಧ್ವಜವನ್ನು ವಿನ್ಯಾಸ ಮಾಡಿದ್ದು, ಇಂದು ರಾಜ್ಯ ಸಂಪುಟ ಸಭೆಗೆ ಹಸ್ತಾಂತರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಾಡಧ್ವಜಕ್ಕೆ ಅನುಮೋದನೆ ನೀಡಿದೆ. ಇದೀಗ ಸರ್ಕಾರ ಅನುಮೋದನೆ ನೀಡಿರುವ ನಾಡಧ್ವಜಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಬೇಕಿದ್ದು, ಕೇಂದ್ರ ಸರ್ಕಾರದ ಅನುಮೋದನೆ ಬಳಿಕ ಪ್ರತ್ಯೇಕ ನಾಡಧ್ವಜ ಹೊಂದಿದ ಮೊದಲ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಲಿದೆ.

Karnataka Cabinet Approves, State Flag, ‘Tricolour’ Awaits Centre’s

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ