ಬಂಗಾರಪೇಟೆ, ಮಾ.8- ಇಂದು ಮುಂಜಾನೆಯೇ ತಾಯಿ ಚಿರತೆ ಹಾಗೂ ಎರಡು ಮರಿಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕವುಂಟು ಮಾಡಿದೆ.
ಮಾಲೂರು ತಾಲ್ಲೂಕಿನ ಮಾರಲಹಳ್ಳಿ ಗ್ರಾಮದಲ್ಲಿ ರಾತ್ರಿ ಕುರಿಯೊಂದನ್ನು ಎಳೆದೊಯ್ದ ಚಿರತೆ ಹಾಗೂ ಮರಿಗಳು ತಿಂದು ಪರಾರಿಯಾಗಿವೆ.
ಮೂರು ದಿನಗಳ ಚಿರತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿದ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಬೋನ್ ಇರಿಸಿದ್ದಾರೆ. ಆದರೆ ಬೋನಿಗೆ ಬೀಳದೆ ಚಿರತೆಗಳು ಗ್ರಾಮದಲ್ಲಿ ಆಗಾಗ ಕಾಣಿಸಿಕೊಂಡು, ಕುರಿ, ಮೇಕೆಗಳನ್ನು ಎಳೆದೊಯುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.