ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಫಾರೂಕ್ ಟಕ್ಲಾ ಬಂಧನ; ಮುಂಬೈಗೆ ಕರೆತಂದ ಸಿಬಿಐ ಅಧಿಕಾರಿಗಳು

ಮುಂಬೈ:ಮಾ-8: ಭೂಗತ ಪಾತಕಿ ದಾವೂದ್‌‌ ಇಬ್ರಾಹಿಂ ಆಪ್ತ, ಗ್ಯಾಂಗ್‌ಸ್ಟರ್‌ ಫಾರೂಕ್‌ ಟಕ್ಲಾನನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆ ತಂದಿದ್ದಾರೆ.

ದುಬೈನಲ್ಲಿ ಫಾರೂಕ್‌ ಟಕ್ಲಾ ನನ್ನು ಬಂಧಿಸಲಾಗಿದೆ. ಬಂಧನದ ನಂತರ ಯುಎಇ ಸರ್ಕಾರ ಟಕ್ಲಾನನ್ನು ಭಾರತಕ್ಕೆ ಅಧಿಕೃತವಾಗಿ ಗಡಿಪಾರು ಮಾಡಿದೆ. ಇಂದು ಬೆಳಗ್ಗೆ 5:30 ಸುಮಾರಿಗೆ ಏರ್‌ ಇಂಡಿಯಾದ ಎಐ-196 ವಿಮಾನದಲ್ಲಿ ಸಿಬಿಐ ಅಧಿಕಾರಿಗಳು ಟಕ್ಲಾನನ್ನು ಕರೆ ತಂದಿದ್ದಾರೆ ಎಂದು ತಿಳಿದುಬಂದಿದೆ. ಇಂದು ಟಕ್ಲಾನನ್ನು ಟಾಡಾ ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.

ಬಂಧಿತ ಫಾರೂಕ್‌ ಟಕ್ಲಾ ಕೊಲೆ, ಸುಲಿಗೆ ಮತ್ತು ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ದುಬೈನಲ್ಲಿ ದಾವೂದ್‌ನ ಆಪರೇಷನ್‌‌ಗಳನ್ನು ಟಕ್ಲಾ ನಿರ್ವಹಿಸುತ್ತಿದ್ದ ಎಂದು ಗೊತ್ತಾಗಿದೆ.

1993ರ ಮುಂಬೈನ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಫಾರೂಕ್‌ ಟಕ್ಲಾ ಕೂಡ ಆರೋಪಿಯಾಗಿದ್ದು, ಬಾಂಬ್‌ ಸ್ಫೋಟ ಪ್ರಕರಣದ ನಂತರ ಭಾರತದಿಂದ ಪಲಾಯನಗೊಂಡಿದ್ದ. ಫಾರೂಕ್‌ ಟಕ್ಲಾನನ್ನು ಭಾರತಕ್ಕೆ ಕರೆತರುವಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿದೆ. 1995ರಲ್ಲಿ ಫಾರೂಕ್‌ ಟಕ್ಲಾ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌ ಜಾರಿಯಾಗಿತ್ತು.

Dawood Ibrahim’s aide, Farooq Takla, deported,Dubai

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ