ವಾಷಿಂಗ್ಟನ್, ಮಾ.8- ಭಾರತದ ಖ್ಯಾತ ವಾಸ್ತುಶಿಲ್ಪ ತಜ್ಞ ಪುಣೆ ಮೂಲದ ಬಾಲಕೃಷ್ಣ ದೋಶಿ ಅವರಿಗೆ ವಾಸ್ತು ಶಿಲ್ಪ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿದ ಪ್ರಿಟ್ಸ್‍ಕೇರ್ ಆರ್ಕಿಟೆಕ್ಟ್ ಪ್ರಶಸ್ತಿ ಬಾಲಕೃಷ್ಣ ದೋಶಿ ಅವರಿಗೆ ಲಭಿಸಿದೆ.
ವಾಸ್ತುಶಿಲ್ಪ ಕ್ಷೇತ್ರದ ನೊಬೆಲ್ ಎಂದೇ ಪರಿಗಣಿಸಲಾಗಿರುವ ಈ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ದೋಶಿ ಪಾತ್ರರಾಗಿದ್ದಾರೆ.
90 ವರ್ಷದ ದೋಶಿ ಕೇವಲ ಕಟ್ಟಡಗಳನ್ನು ವಿನ್ಯಾಸಗೊಳಿಸಿರುವುದಲ್ಲದೇ ಅನೇಕ ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ.