ಮಂಡ್ಯ, ಮಾ.8- ಬೆಳ್ಳಂಬೆಳಗ್ಗೆ ಕಾಡಾನೆಗಳ ಹಿಂಡು ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕವುಂಟು ಮಾಡಿದೆ.
ಮದ್ದೂರು ತಾಲ್ಲೂಕಿನ ತೈಲೂರು ಗ್ರಾಮದ ಕೆರೆಯೊಂದರಲ್ಲಿ ಇಂದು ಮುಂಜಾನೆ ಆರು ಕಾಡಾನೆಗಳು ಕಂಡುಬಂದಿವೆ.
ಇದನ್ನು ಕಂಡು ಭಯಭೀತರಾದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಆಹಾರ ನೀರು ಅರಸಿ ಕಾಡಾನೆಗಳು ಗ್ರಾಮಕ್ಕೆ ಬಂದಿವೆ. ಶೀಘ್ರದಲ್ಲೇ ಅವುಗಳನ್ನು ಕಾಡಿಗಟ್ಟಲಾಗುವುದು ಎಂದು ತಿಳಿಸಿದ್ದಾರೆ.
ಕಾಡಾನೆಗಳ ಹಿಂಡು ನೋಡಲೆಂದು ಸುತ್ತಮುತ್ತಲಿನ ಗ್ರಾಮಸ್ಥರು ಜಮಾಯಿಸಿದ್ದು, ಯಾರು ಗದ್ದಲ, ಗಲಾಟೆ ಮಾಡದಂತೆ ಸ್ಥಳೀಯರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.