ನಾಳೆ ರಾಮರಾಜ್ಯ ರಥಯಾತ್ರೆ
ಬೆಂಗಳೂರು, ಮಾ.8- ಶ್ರೀ ರಾಮದಾಸ ಮಿಷನ್ ಯೂನಿರ್ವಸಲ್ ಸೊಸೈಟಿ ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ರಾಮರಾಜ್ಯ ರಥಯಾತ್ರೆ(ಮಹಾಸಮ್ಮೇಳನ) ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 7ರಿಂದ 9 ಗಂಟೆವರೆಗೆ ಆರ್ಟಿನಗರದ ಹೆಚ್.ಎಂ.ಟಿ. ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ನಿರ್ವಾಹಕ ಅಜಿತ್ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.13ರಿಂದ ಮಾ.25ರವರೆಗೂ ಸಾಗಲಿರುವ ರಥಯಾತ್ರೆಯೂ ಅಯೋಧ್ಯೆಯಿಂದ ಆರಂಭಗೊಂಡಿದ್ದು, ಮಹಾರಾಷ್ಟ್ರ ಪಂಡರೀಪುರ, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಗಂಗಾವತಿ, ಕಿಷ್ಕಿಂದ, ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗ, ತುಮಕೂರಿನಿಂದ ನಾಳೆಗೆ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶೋಭಯಾತ್ರೆ ಮತ್ತು ರಾಮರಾಜ್ಯ ಮಹಾಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
10.30ಕ್ಕೆ ಬೆಂಗಳೂರಿನ ನೆಲಮಂಗಲಕ್ಕೆ ರಥ ಬರಲಿದ್ದು, ಹೆಬ್ಬಾಳದ ಫ್ಲೈಓವರ್ನಿಂದ ಹೆಚ್ಎಂಟಿ ಆಟದ ಮೈದಾನದವರೆಗೆ ಕಾಲ್ನಡಿಗೆ ಮೂಲಕ ಹಿಂದು ಸಂಪ್ರದಾಯದ ಪ್ರಕಾರ ಕಳಸ ಹಾಗೂ 200 ಬೈಕ್ ರ್ಯಾಲಿ, ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ತಲುಪಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೈ.ಎ.ನಾರಾಯಣಸ್ವಾಮಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಮಜನ್ಮ ಭೂಮಿ ಶಿಲಾನ್ಯಾಸ ಸಮಿತಿಯ ಉಪಾಧ್ಯಕ್ಷ ಕಮಲ್ ನಯನ್ಜಿ ಭಾಗವಹಿಸಲಿದ್ದು , ಸಾಮಾಜಿಕ ನಾಯಕ ಸೂಲಿಬೆಲೆ ಚಕ್ರವರ್ತಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.